*ಕುಡಿದ ಅಮಲಿನಲ್ಲಿ ಮನೆಗೆ ತೆರುಳುತ್ತಿದ್ದ ವೇಳೆ ಕಾಲೇಜು ವಿದ್ಯಾರ್ಥಿ ಅಡ್ಡಗಟ್ಟಿ ಮನ ಬಂದಂತೆ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ*

Oplus_131072

ಆಲೂರು -ತಾಲ್ಲೂಕಿನ ಕೆಂಚನಹಳ್ಳಿ ಪುರ ಗ್ರಾಮದ ರಮೇಶ್ ಎಂಬ ಪುತ್ರನ ಮೇಲೆ ಮಾರ್ಚ್ ತಿಂಗಳಲ್ಲಿ ಆಲೂರು ತಾಲ್ಲೂಕಿನ ಬೈರಾಪುರ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ಮೂರು ಜನ ಯುವಕರು ಸೇರಿಕೊಂಡು ತಳಿಸಿದ್ದಲ್ಲದೆ ಮನೆಯವರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ವಿದ್ಯಾರ್ಥಿ ಮನೆಯವರಿಗೆ ತಿಳಿಸದೆ ಸುಮ್ಮುನಿದ್ದ. ಯುವಕ ತಳಿಸಿದ ವಿಡಿಯೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿಟ್ಟುಕೊಂಡು ಈಗ ವೈರಲ್ ಮಾಡಿ ತಮ್ಮ ವಿಕೃತಿ ಮೆರೆದಿದ್ದಾರೆಂದು ಪೋಷಕ ರಮೇಶ್ ಆರೋಪಿಸಿದ್ದಾರೆ.ಪೋಷಕ ರಮೇಶ್ ಮಾತಾನಾಡಿ ನಮ್ಮ ಮಗನಿಗೆ ಕಳೆದ ತಿಂಗಳ ಹಿಂದೆ ಕೆಲ ಯುವಕರು ಸೇರಿಕೊಂಡು ಹೊಡೆದಿದ್ದಾರೆ ಮತ್ತು ನಮಗೆ ಹೇಳಿದರೆ ಕೊಲೆ ಮಾಡುವುದಾಗಿ ಅವನಿಗೆ ಬೆದರಿಕೆ ಹಾಕಿದ್ದಾರೆ. ನನ್ನ ಮಗನು ಕೂಡ ನಮ್ಮ ಬಳಿ ಏನು ಹೇಳಿಲ್ಲ ಆದರೆ ಈಗ ಮೊಬೈಲ್ ನಲ್ಲಿ ನನ್ನ ಮಗನಿಗೆ ಹೊಡೆದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟು ನಮ್ಮ ಮರ್ಯಾದೆ ತೆಗೆಯುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!