
ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಹೊಕ್ರಾಣಿ ಗ್ರಾಮದ ಚಲವಾದಿ ಸಮುದಾಯದ ಕುಮಾರಿ ಅಶ್ವಿನಿ, ತಂದೆ ತಿಪ್ಪಾರೆಡ್ಡಿ ಎಂಬ ಯುವತಿಯ ಕುರಿತು ಅತ್ಯಂತ ದುಃಖಕರ ಘಟನೆ ನಡೆದಿರುವ ಮಾಹಿತಿ ತಿಳಿದು ಬಂದಿದೆ. ಬಯಲು ಶೌಚಕ್ಕೆ ತೆರಳಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿ ಬಾವಿಗೆ ಎಸೆದಿರುವ ಆರೋಪ ಕೇಳಿಬಂದಿದೆ.
ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ಹಾಗೂ ತ್ವರಿತ ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಬೇಕು.ಈ ಘಟನೆಯನ್ನು ಖಂಡಿಸುವ ಎಲ್ಲಾ ದಲಿತ, ಪ್ರಗತಿಪರ ಹಾಗೂ ಸಮಾನ ಮನಸ್ಕ ಹೋರಾಟಗಾರರು ಶಾಂತಿಯುತವಾಗಿ ಒಂದಾಗಿ ಧ್ವನಿ ಎತ್ತುವಂತೆ ಮನವಿ ಮಾಡಿಕೊಳ್ಳುತ್ತೇನೆ.
ಅತ್ಯಾಚಾರ ಎಸಗಿದ ಕ್ರೂರಿಗಳಿಗೆ ಶಿಕ್ಷೆ ಯಾಗಲಿ
ನ್ಯಾಯಕ್ಕಾಗಿ ನಮ್ಮ ಧ್ವನಿ ಒಂದಾಗಲಿ..
ಕವಿತ ಬಸವರಾಜು
