

ಹಾಸನ .ಜಿಲ್ಲೆಯ ಪ್ರವಾಸಿ ತಾಣ ಬೇಲೂರು ಪಟ್ಟಣದಲ್ಲಿ 80ನೇ ಸ್ವಾತಂತ್ರೋತ್ಸವ ಅಂಗವಾಗಿ 24X7 ಸಮಾಜ ಸೇವ ತಂಡ ಟಿಪ್ಪು ಬಾಯ್ಸ್ ಹಸಿರು ಭೂಮಿ ಪ್ರತಿಷ್ಠಾನ ಜೀವ ಸಂಜೀವಿನಿ ರಕ್ತ ನಿಧಿ ಕೇಂದ್ರ ಹಾಸನ ಬೇಲೂರಿನ ಪ್ರಗತಿಪರ ಸಂಘಟನೆಯ ಸಹಾಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ಜೂನಿಯರ್ ಕಾಲೇಜ್ ಆವರಣದಲ್ಲಿ ದಿನಾಂಕ 15.8.2026. ಶನಿವಾರ ಬೆಳಗ್ಗೆ 8:30 ರಿಂದ ಮಧ್ಯಾಹ್ನ 1:00 ರವರಿಗೆ ಆಯೋಜಿಸಲಾಗಿದೆ.18 ವರ್ಷ ಮೇಲ್ಪಟ್ಟ ಆರೋಗ್ಯವಂತ ಪ್ರತಿಯೊಬ್ಬರು ಬಂದು ರಕ್ತ ನೀಡಬಹುದು ಒಬ್ಬ ವ್ಯಕ್ತಿ ರಕ್ತ ನೀಡಿದರೆ ಮೂರು ಜೀವ ಉಳಿಸಿದಂತೆ ರಕ್ತದಾನ ಮಹಾದಾನ ರಕ್ತದಾನ ಜೀವದಾನ ಹಾಗಾಗಿ ತಾವು ಆರೋಗ್ಯವಂತವಾಗಿರಲು ಬೇರೆಯವರ ಜೀವ ಕಾಪಾಡಲು ಸಹಕಾರಿ ಯಾಗುತ್ತದೆ ಈ ಬೃಹತ್ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು 24X7 ಸಮಾಜ ಸೇವ ತಂಡದ ಸಂಸ್ಥಾಪಕ ಅಧ್ಯಕ್ಷ ನೂರ್ ಅಹಮದ್ ತಿಳಿಸಿದರು.
