
ಮೈಸೂರು – ಹುಣಸೂರು ಉಪವಿಭಾಗಾಧಿಕಾರಿ ಮತ್ತು ಅವರ ಆಪ್ತ ಸಹಾಯಕ ಶಿವಕುಮಾರ್ ಸೋಮವಾರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಒಂದು ವರ್ಷದಿಂದ ಹೆಚ್. ಡಿ. ತಾಲ್ಲೂಕಿನ ಸ. ನಂ. 17/26 ರ 4 ಎಕರೆ 31 ಗುಂಟೆ ಜಮೀನಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಯುತ್ತಿತ್ತು ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನಿವಾಸಿ ಡಾ . ರೂಪಾ ಅವರ ಬಳಿ ಉಪವಿಭಾಗಾಧಿಕಾರಿ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ತದನಂತರ 10.50 ಲಕ್ಷಕ್ಕೆ ಒಪ್ಪಂದವಾಗಿತ್ತು. ಈ ಪೈಕಿ ಮೊದಲ ಕಂತಾಗಿ 5 ಲಕ್ಷ ಪಡೆದಿದ್ದರು.2 ನೇ ಕಂತಿನ 5.50 ಲಕ್ಷ ಪಡೆದು ಕೊಳ್ಳುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಉಪವಿಭಾಗಾಧಿಕಾರಿ ಮನೆಯಲ್ಲಿ ಹಣವನ್ನು ಪಡೆಯುವಾಗ ಕಾವ್ಯರಾಣಿ ಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತನಿಖಾ ಅಧಿಕಾರಿ ರವಿಕುಮಾರ್ , ಮಡಿಕೇರಿ ಡಿ.ವೈ.ಎಸ್.ಪಿ. ದಿನಕರ ಶೆಟ್ಟಿ, ಇನ್ಸ್ಪೆಕ್ಟರ್ ವೀಣಾ ನಾಯಕ್ , ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
