




ಸಕಲೇಶಪುರ – ತಾಲ್ಲೂಕಿನ ಹೃದಯ ಭಾಗದಲ್ಲಿರುವ ಡಾಕ್ಟರ್ ಅಂಬೇಡ್ಕರ್ ಭವನದಲ್ಲಿ ಪ. ಜಾತಿ/ ಪಂ.ಪಂಗಡಗಳ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಇವರ ವತಿಯಿಂದ ಪ.ಜಾತಿ/ ಪಂ. ಪಂಗಡದ ಮಕ್ಕಳು SSLC, PUC ಯಲ್ಲಿ 85% ಹಾಗೂ ಪದವಿಯಲ್ಲಿ 70% ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ರಾಜ್ಯ ಸರ್ಕಾರಿ ನೌಕರರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಶ್ರೀ ಕೀರ್ತಿ ಸುಳ್ಳಕ್ಕಿ ಪೋಲೀಸ್ ಇಲಾಖೆ ಇವರು ಸ್ವಾಗತಿಸಿದರು.ಶ್ರೀ N.E. ಕ್ರಾಂತಿ IFS ಬೆಳಗಾವಿ ಇವರು ಪ್ರಾಸ್ತಾವಿಕ ನುಡಿ ಮಂಡಿಸಿದರು.ಕಾರ್ಯಕ್ರಮ ಮುಂದುವರೆದಂತೆ ಶ್ರೀ ಕೋಮಲೇಶ್ ಪ್ರಾರ್ಥನೆ ಮಾಡಿದರು. ನಂತರ ವೇದಿಕೆ ಮೇಲೆ ಆಸೀನರದಂತಹ ಗಣ್ಯರು ಗಳಿಂದ ದೀಪ ಹಚ್ಚಿ, ಬುದ್ದ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ನಂತರ ಶಾಸಕ ಶ್ರೀ S. ಮಂಜುನಾಥ್ ( ಸಿಮೆಂಟ್ ಮಂಜು) ರವರು ಮಾತನಾಡಿ ಡಾಕ್ಟರ್ ಅಂಬೇಡ್ಕರ್ ಅವರು ಈ ದೇಶಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ಕೊಟ್ಟಿದ್ದಾರೆ. ಹಾಗೆಯೇ ಶ್ರೀಮಂತನಿಗೂ ಒಂದೇ ಓಟು ಬಡವನಿಗೂ ಒಂದೇ ಓಟು ಇಂತಹ ಸಂವಿಧಾನವನ್ನು ನಮಗೆ ಕೊಟ್ಟಿದ್ದಾರೆ. ಹಾಗಾಗಿ ಇಲ್ಲಿ ಮುಂದೆ ಕುಳಿತಿರುವ ಮಕ್ಕಳು IAS , IPS ಅಧಿಕಾರಿಗಳಾಗಿ ಬರಬೇಕು ಎಂದರು.ನಂತರ ಮಾತನಾಡಿದ H.K ಕುಮಾರ್ ಸ್ವಾಮಿ ರವರು ಈ ಸಮುದಾಯಕ್ಕೆ ಇಂತಹ ಕಾರ್ಯಕ್ರಮಗಳು ಅನಿವಾರ್ಯ. ಸರ್ಕಾರಿ ನೌಕರರು ಈ ರೀತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಸಂತೋಷ ಹಾಗೂ ಹೆಮ್ಮೆ ಪಡುವ ವಿಚಾರ ಎಂದು ಶ್ಲಾಘಿಸಿದರು.ನಂತರ ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಶ್ರೀ ಮುರಳಿ ಮೋಹನ್ ರವರು ಮಾತನಾಡಿ ನನಗೆ ಅಧಿಕಾರ ಇರಲಿ ಅಥವಾ ಇಲ್ಲದಿರಲಿ ಈ ಸಮುದಾಯದ ಜೊತೆ ಗಟ್ಟಿಯಾಗಿ ನಿಲ್ಲುತ್ತೇನೆ ಹಾಗೂ ನನ್ನ ಕೈಲಾದ ಸಹಾಯವನ್ನು ಈ ಸಮುದಾಯಕ್ಕೆ ಮಾಡುತ್ತಾ ಬಂದಿದ್ದೇನೆ. ಮತ್ತು ನಾನು ಈ ಸಮುದಾಯವನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳುವ ವ್ಯಕ್ತಿ ನಾನಲ್ಲ. ಈ ಸಮುದಾಯಕ್ಕೆ ಕಷ್ಟ ಎದುರಾದಾಗ ಜೊತೆ ನಿಂತು ಹೋರಾಟ ಮಾಡುವ ಸ್ವಭಾವದವನು ಎಂದರು.ಸಂಸದ ಶ್ರೀ ಶ್ರೇಯಸ್ ಪಟೇಲ್ ಅವರು ಮಾತನಾಡಿ ನಾನು ಸಂಸದನಾಗಲು ಕಾರಣ ವಿದ್ಯೆ, ಹಾಗಾಗಿ ನಮಗೆ ವಿದ್ಯೆ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಹಾಗೆಯೇ ಈ ಸಕಲೇಶಪುರದ ವಿದ್ಯಾರ್ಥಿಗಳು ನಮ್ಮ ಹಾಸನ ಜಿಲ್ಲೆಗೆ ಐ. ಎ. ಎಸ್. ಐ. ಪಿ. ಎಸ್. ಅಧಿಕಾರಿಗಳಾಗಿ ಬರಬೇಕು ಆವಾಗ ಈ ಜಿಲ್ಲೆಗೆ ಗೌರವ ಸಲ್ಲುತ್ತದೆ ಎಂದರು.ಮುಖ್ಯ ಭಾಷಣಕಾರರು ಆದ ಅಕ್ಕ I A S ಅಕಾಡೆಮಿ ಸಂಸ್ಥಾಪಕರು ಡಾ. ಶಿವಕುಮಾರ್ ಮಾತನಾಡಿ ನೋಡಿ ವಿದ್ಯಾರ್ಥಿಗಳೇ ನೀವುಗಳು ಅಷ್ಟೋ ಇಷ್ಟೋ ಅಂಕಗಳನ್ನು ತೆಗೆದಿದ್ದೀರಿ ಆದರೆ ಅದು ನಿಮಗೆ ಲೆಕ್ಕ ಅಲ್ಲ, ನೀವುಗಳು ಈಗ ಹುಲಿಯ ಮೇಲೆ ಕುಳಿತ್ತಿದ್ದೀರಿ ಇನ್ನೂ ನೀವು ನಿಮ್ಮ ಜೀವನದುದ್ದಕ್ಕೂ ಹುಲಿಯ ಮೇಲೆಯೇ ಕುಳಿತಿರಬೇಕು. ನೀವು ಏನಾದರೂ ಕೆಳಗೆ ಇಳಿದರೆ ನಿಮ್ಮನ್ನು ಹುಲಿ ತಿಂದು ಹಾಕುತ್ತದೆ. ಅಂದರೆ ಇದರ ಅರ್ಥ ನೀವುಗಳು ಶ್ರಮದಿಂದ ಓದುತ್ತಿದ್ದೀರಿ, ಆ ಶ್ರಮವನ್ನು ವ್ಯಯ ಮಾಡದೇ ಮುಂದುವರೆಸಿಕೊಂಡು ಹೋಗಬೇಕು ಇಲ್ಲವಾದಲ್ಲಿ ನಿಮ್ಮ ಶ್ರಮಕ್ಕೆ ಫಲ ಸಿಗುವುದಿಲ್ಲ ಎಂದರ್ಥ. ಹಾಗೂ ನೀವುಗಳು ಬುದ್ದಿವಂತ ಮಕ್ಕಳಿದ್ದೀರಾ ಹಾಗಾಗಿ ಸರ್ಕಾರಿ ನೌಕರರು ನಿಮ್ಮನ್ನು ಬೆನ್ನು ತಟ್ಟಿ ಸನ್ಮಾನಿಸಿ ಬೇಕು ಅಂತ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಹಾಗೆಯೇ ನೀವೆಲ್ಲ ಅಂಬೇಡ್ಕರ್ ಅನುಯಾಯಿಗಳು ಅಂದ ಮೇಲೆ ಅಂಬೇಡ್ಕರ್ ಅವರು ದಿನದಲ್ಲಿ 12 ರಿಂದ 15 ಘಂಟೆಗಳ ಕಾಲ ಓದುತ್ತಿದ್ದರು, ಆದರೆ ನೀವೇಕೆ ಅವರ ಅರ್ಧ ಪಾಲು ಓದಬಾರದು ಕನಿಷ್ಠ 6 ರಿಂದ 7 ಘಂಟೆಗಳ ಕಾಲ ಓದಿದರೆ ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ ಎಂದರು. ಹಾಗೆಯೇ ಅಂಬೇಡ್ಕರ್ ಅವರ ಜೀವಿತಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಬಾರದ ಹಾಗೆ ಈ ಸಮಾಜದಲ್ಲಿ ನಡೆದು ಕೊಂಡಿರುತ್ತಾರೆ ಕಾರಣ ಅವರು ಅನುಸರಿಸುತ್ತಿದ್ದ ಬುದ್ದ ಮಾರ್ಗ. ಭಗವಾನ್ ಬುದ್ಧರು ಅವರ ಗುರು ಬುದ್ದರ ಪಂಚಶೀಲ ಮತ್ತು ಅಷ್ಟಾಂಗ ಮಾರ್ಗ ಅಂಬೇಡ್ಕರ್ ರವರನ್ನು ಪರಿವರ್ತಿಸಿದ ಪುರಾವೆ. ಆ ಕಾರಣದಿಂದಾಗಿ ನೀವೆಲ್ಲರೂ ನಿಜವಾದ ಅಂಬೇಡ್ಕರ್ ಅನುಯಾಯಿಗಳೇ ಆಗಿದ್ದರೆ ಅವರು ಅನುಸರಿಸುತ್ತಿದ್ದ ಬುದ್ದ ಮಾರ್ಗ ಅನುಸರಿಸಿದರೆ ನೀವು ಉನ್ನತ ಮಟ್ಟದ ಸ್ಥಾನವನ್ನು ಗಳಿಸುತ್ತೀರಿ. ಮತ್ತು ನೀವುಗಳು ಬುದ್ದ ಮತ್ತು ಧಮ್ಮ ಎಂಬ ಪುಸ್ತಕ ಕೊಂಡು ಓದುವುದರಿಂದ ಈ ನಾಡಿನ ಒಳ್ಳೆಯ ಪ್ರಜೆಯಾಗಿ ಹೊರ ಹೊಮ್ಮುತ್ತೀರಿ ಎಂದರು.ನಿವೃತ್ತ ನೌಕರರಿಗೆ ಸನ್ಮಾನಿಸಲಾಯಿತು ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.ಈ ಸಂದರ್ಭದಲ್ಲಿ ಶ್ರೀ ಮಹೇಶ್ ಶಿಕ್ಷಕರು. ಅಧ್ಯಕ್ಷರುಪ. ಜಾತಿ/ ಪ. ಪಂ. ಸ.ನೌ.ಕ್ಷೇ.ಸ. ಸಕಲೇಶಪುರ.ಶ್ರೀ ಎಸ್. ಮಂಜುನಾಥ್ (ಸಿಮೆಂಟ್ ಮಂಜು) ಶಾಸಕರುಸಕಲೇಶಪುರ -ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರಶ್ರೀ ಶ್ರೇಯಸ್ ಪಟೇಲ್ ಸಂಸದರುಲೋಕಸಭಾ ಸದಸ್ಯರು ಹಾಸನ.ಶ್ರೀ ಹೆಚ್ ಕೆ. ಕುಮಾರ್ ಸ್ವಾಮಿ ಮಾಜಿ ಸಚಿವರುಸಕಲೇಶಪುರ – ಆಲೂರು – ಕಟ್ಟಾಯ ವಿಧಾನಸಭಾ ಕ್ಷೇತ್ರಶ್ರೀ ಮುರಳಿ ಮೋಹನ್ ಕಾಂಗ್ರೆಸ್ ಮುಖಂಡರುಅಧ್ಯಕ್ಷರು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಹಾಗೂ ಸಕಲೇಶಪುರ – ಆಲೂರು – ಕಟ್ಟಾಯ ವಿಧಾನಸಭಾ ಕ್ಷೇತ್ರಶ್ರೀ ಮತಿ ಶಿವಮ್ಮ ಬಿ. ಎಸ್.ಪಿ. ಮುಖಂಡರುಶ್ರೀ ಡಾII ಶಿವಕುಮಾರ್ ಸಂಸ್ಥಾಪಕರು ಅಕ್ಕ ಐ. ಎ. ಎಸ್. ಅಕಾಡೆಮಿ ನವದೆಹಲಿ.ಶ್ರೀ ಕರುಣಾಕರ ಕೆ.ಎ.ಎಸ್.ಸಹಾಯಕ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ ಬೆಂಗಳೂರು.ಶ್ರೀ ಅಣ್ಣಯ್ಯ ಹೆತ್ತೂರುರಾಜ್ಯ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರುಶ್ರೀ ಶಾಂತರಾಜ್ ಶಿಡಿಗಳಲೆ ಅಧ್ಯಕ್ಷರು ಕ.ರಾ.ಸ.ನೌ.ಸ. ಸಕಲೇಶಪುರ.ಶ್ರೀ ಶಿವಶಂಕರ್ ರಾಜ್ಯಾಧ್ಯಕ್ಷರು ಕ.ರಾ.ಸ.Sc/St ಸಮನ್ವಯ ಸಮಿತಿ ಬೆಂಗಳೂರುಶ್ರೀ ರಾಜೇಂದ್ರ ದೊಡ್ಡಮಗ್ಗೆ ಅಧ್ಯಕ್ಷರುSc/St ಪ್ರಾ. ಮತ್ತು ಮಾ. ಶಾಲೆ ಕ್ಷೇ.ಸ.ಹಾಸನ.ಶ್ರೀ ಪ್ರಕಾಶ್ ಕುಮಾರ್ ಉಮ್ಮತ್ತೂರುಸ. ನಿ. ಕೃಷಿ ಇಲಾಖೆ ಸಕಲೇಶಪುರಡಾ II ವೆಂಕಟೇಶ್ ತಾಲೂಕು ಅಧಿಕಾರಿಗಳುಪಶುಸಂಗೋಪನೆ ಇಲಾಖೆ ಸಕಲೇಶಪುರಶ್ರೀ ಕೊಮಾರಯ್ಯ. ಬಿ.ಹೆಚ್. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳುಶ್ರೀ ಹೆಚ್.ಆರ್. ಕೊಮಾರಯ್ಯ. ನಿವೃತ್ತ ಪಂ.ಅ. ಅಧಿಕಾರಿಗಳುಶ್ರೀ ಕೆ. ಬಿ. ಭೈರಪ್ಪ. ನಿವೃತ್ತ ಮುಖ್ಯೋಪಾಧ್ಯಾಯರುಶ್ರೀ ಕೃಷ್ಣ ಕುಮಾರ್ ಮಾಜಿ ಹುಡಾ ಅಧ್ಯಕ್ಷರು ಹಾಸನ.ಹಾಗೂ ಸಂಘದ ಪದಾಧಿಕಾರಿಗಳಾದ ಶ್ರೀ ಕೀರ್ತಿ ಸುಳ್ಳಕ್ಕಿ, ಶ್ರೀ ಪೃಥ್ವಿ ಸುಳ್ಳಕ್ಕಿ, ಶ್ರೀ ಚಂದ್ರಶೇಖರ್ ವಳಲಹಳ್ಳಿ, ಹಾಗೂ ಎಲ್ಲಾ ಪದಾಧಿಕಾರಿಗಳು , ದಲಿತ ಮುಖಂಡರು ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
