ಸೈಟ್ ಹೆಸರಲ್ಲಿ ವಂಚನೆ ಮಾಡುತ್ತಿದ್ದಾರಾ ಈ ಹೋರಾಟಗಾರರು – ಯಾರೀತ

Oplus_131072

ಸೈಟ್ ಬೇಕಾದರೆ ಹಣ ಕೊಡಿ: ತನಿಖೆಗೆ ಸ್ಥಳೀಯರ ಒತ್ತಾಯ🔴ಸಕಲೇಶಪುರ: ಬಸವನಹಳ್ಳಿ ಬ್ರಷ್ಟಾಚಾರಬೀದಿಗೆ. ಲಕ್ಷ ಲಕ್ಷ ಹಣ ಸಂದಾಯ ಯಾರಿಗೆ?🔴ಬಸವನಹಳ್ಳಿಯ ಹರಿಜನ ಕೇರಿ ನಿವೇಶನ ವಿವಾದಕ್ಕೆ ಹೊಸ ತಿರುವು.ಹಣ ವಸೂಲಿ ಆರೋಪದ ಬಗ್ಗೆ ಸಮಗ್ರ ತನಿಖೆಗೆ ಸ್ಥಳೀಯರ ಆಗ್ರಹ ಮಾಡಿದ್ದಾರೆಸಕಲೇಶಪುರ ತಾಲೂಕಿನ ಅಗ್ರಹಾರ ವ್ಯಾಪ್ತಿಯ ಬಸವನಹಳ್ಳಿಯ ಸುಮಾರು 20 ಕುಂಟೆ ಜಾಗಕ್ಕೆ ಸಂಬಂಧಿಸಿದ ನಿವೇಶನ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಇದೀಗ ಹಣ ವಸೂಲಿ ಆರೋಪಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ನಿವೇಶನವಿಲ್ಲದ ಬಡ ಕುಟುಂಬಗಳಿಗೆ ಜಾಗ ಒದಗಿಸುವ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಬಡವರಿಂದಸಂಗ್ರಹಿಸಲಾಗಿದೆ ಎಂದು ಕೆಲ ಸ್ಥಳೀಯರು ಆರೋಪಿಸಿದ್ದು, ಈ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.ಸ್ಥಳೀಯರ ಮಾಹಿತಿ ಪ್ರಕಾರ, ಬಸವನಹಳ್ಳಿ ಪರಿಶಿಷ್ಟ ಜಾತಿ ಪ್ರದೇಶದಲ್ಲಿ ಬಡ ನಿವೇಶನ ರಹಿತ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಸಾಮಾಜಿಕ ಹೋರಾಟಗಾರರೊಬ್ಬರು ಮುಂದಾಗಿದ್ದರು. ಆರಂಭದಲ್ಲಿ ಹಲವರು ಈ ಪ್ರಯತ್ನವನ್ನು ಸ್ವಾಗತಿಸಿದ್ದರೆ, ಇತ್ತೀಚಿನ ಬೆಳವಣಿಗೆಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ . ಎಂದು ಹೇಳಲಾಗುತ್ತಿದೆ.ಸ್ಥಳೀಯ ಕೆಲವರು ನಿವೇಶನ ಕೊಡಿಸುವ ಭರವಸೆ ನೀಡಿ ತಲೆಗೆ 70,000ದಂತೆ ಒಟ್ಟು ಹಲವರಲ್ಲಿ ಬೇಡಿಕೆ ಇಟ್ಟು ವಸೂಲಿ ರೋಪದಲ್ಲಿ ಅಂದಾಜು ಇಪ್ಪತ್ತು ಲಕ್ಷಕ್ಕೂ ಅಧಿಕವಾಗಿ ಹಣಪಡೆದುಕೊಳ್ಳಲಾಗಿದೆ ಎಂದು ನಾಗರೀಕರು ಆರೋಪಿಸುತ್ತಿದ್ದು, ಬಡ ಜನರು ದಿನಗೂಲಿ ಮಾಡಿ ಪೈಸೆ ಪೈಸೆ ಕೂಡಿಟ್ಟ ಹಣವನ್ನು ಕಳೆದುಕೊಂಡಿರುವುದಾಗಿ ನೋವು ವ್ಯಕ್ತಪಡಿಸುತ್ತಿದ್ದಾರೆ. ಈ ಆರೋಪಗಳ ಸತ್ಯಾಸತ್ಯತೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.ಪ್ರಸ್ತುತ ವಿವಾದಿತ ಜಾಗದಲ್ಲಿ ಕೆಲವರು ಗುಡಿಸಲು ನಿರ್ಮಿಸಿಕೊಂಡು ಟಾರ್ಪಾಲ್ ಹಾಗೂ ರೂಫಿಂಗ್ ಅಳವಡಿಸಿಕೊಂಡು ವಾಸಿಸುತ್ತಿದ್ದು, ಮತ್ತೊಂದೆಡೆ ನಿಜವಾದ ನಿವೇಶನ ರಹಿತರಿಗೆ ಅವಕಾಶ ಸಿಕ್ಕಿಲ್ಲ ಎಂಬ ವಾದವೂ ಕೇಳಿಬರುತ್ತಿದೆ. ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಕೆಲವರು ಸಹ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ ಎಂಬ ಆರೋಪಗಳು ಸಹ ವ್ಯಕ್ತವಾಗುತ್ತಿವೆ.ಈ ವಿವಾದಕ್ಕೆ ಸಂಬಂಧಿಸಿದಂತೆ ಭೂಮಿಯ ಹಕ್ಕು ಮತ್ತು ಸ್ವಾದೀನ ವಿಚಾರವಾಗಿ ಮಾನ್ಯ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ (W.P.) ದಾಖಲಾಗಿರುವುದು ತಿಳಿದುಬಂದಿದೆ. ಆದರೆ, ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ ಅಂತಿಮ ಆದೇಶ ಹೊರಬಂದಿಲ್ಲ. ನ್ಯಾಯಾಲಯದ ಅಂತಿಮ ತೀರ್ಪು ಬರುವ ಮುನ್ನವೇ ಜಾಗ ತಮ್ಮ ಹೆಸರಿಗೆ ಆಗಿದೆ ಎಂಬ ರೀತಿಯಲ್ಲಿ ಸಂಭ್ರಮಾಚರಣೆ ನಡೆಸಲಾಗಿದೆ ಎಂಬ ಮಾತುಗಳು ಗ್ರಾಮದಲ್ಲಿ ಹರಿದಾಡುತ್ತಿವೆ.ಇದೇ ವೇಳೆ, “ಪ್ರಕರಣ ನ್ಯಾಯಾಲಯದಲ್ಲಿದೆ” ಎಂಬುದನ್ನು ಆಧಾರವಾಗಿಸಿಕೊಂಡು ಕೆಲವರಿಂದ ನಿವೇಶನ ಕೊಡಿಸುವ ಭರವಸೆ ನೀಡಿ ಹಣ ಸಂಗ್ರಹಿಸಲಾಗಿದೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ. ತಮಗೆ ನಿವೇಶನ ಸಿಗುತ್ತದೆ ಎಂಬ ನಂಬಿಕೆಯಿಂದಕೆಲವರು ತಮ್ಮ ತಾಳಿ ಗುಂಡು.ಚಿನ್ನದ ಸರ, ಹಾಗೂ ಓಲೆ ಅಡ ಇಟ್ಟು ಕೊಟ್ಟರೆ, ಇನ್ನೂ ಕೆಲವರು ಬಡ್ಡಿಗೆ ಹಣ ತೆಗೆದುಕೊಂಡು ಕೊಟ್ಟಿರುವ ಉದಾಹರಣೆ ಇದೆ.ಹಣ ನೀಡಿದ ಬಡವರಿಗೆ ಇತ್ತ ಹಣಕ್ಕೆ ಹಣವೂ ಇಲ್ಲ ಮತ್ತೊಂದೆಡೆನಿವೇಶನವೂ ಇಲ್ಲದ ಅನೇಕ ಕುಟುಂಬಗಳು ಇದೀಗ ಆತಂಕದಲ್ಲಿದ್ದು, ತಮ್ಮ ಹಣದ ಭವಿಷ್ಯದ ಬಗ್ಗೆ ಚಿಂತಿಸುತ್ತಿರುವುದಾಗಿ ಹೇಳಿಕೊಂಡಿವೆ.ಈ ಎಲ್ಲ ಬೆಳವಣಿಗೆಗಳ ನಡುವೆ ಸಾಮಾಜಿಕ ಹೋರಾಟಗಾರ ಅವರ ಹೆಸರು ಸಾರ್ವಜನಿಕ ಚರ್ಚೆಗೆ ಬಂದಿದ್ದು, ಅವರ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಅವರು ಇನ್ನೂ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.ಆರೋಪಗಳು ಸತ್ಯವೇ ಅಥವಾ ಸುಳ್ಳೇ ಎಂಬುದು ಸಂಬಂಧಪಟ್ಟ ಅಧಿಕಾರಿಗಳ ತನಿಖೆ ಹಾಗೂ ನ್ಯಾಯಾಲಯದ ಪ್ರಕ್ರಿಯೆಯ ಬಳಿಕವೇ ಸ್ಪಷ್ಟವಾಗಬೇಕಿದೆ.ಗ್ರಾಮಸ್ಥರು ಈ ಪ್ರಕರಣದ ಕುರಿತು ಜಿಲ್ಲಾಡಳಿತ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ, ನಿಜವಾದ ನಿವೇಶನ ರಹಿತರಿಗೆ ನ್ಯಾಯ ದೊರಕಿಸಿ, ನಿರಪರಾಧಿಗಳ ಹಣ ವಂಚನೆಯಾಗಿದ್ದರೆ ಅದನ್ನು ಮರುಪಡೆಯುವ ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.– 🔴ನಿವೇಶನದ ಭರವಸೆ ನೀಡಿ ಲಕ್ಷಾಂತರ ರೂ. ಹಣ ಸಂಗ್ರಹಿಸಿದ ಆರೋಪ.-🔴ಪ್ರತಿ ಕುಟುಂಬದಿಂದ ₹7೦ಸಾವಿರ ಪಡೆದಿರುವ ಆರೋಪ.– 🔴ಚಿನ್ನ ಅಡವಿಟ್ಟು, ಬಡ್ಡಿಗೆ ಸಾಲ ಮಾಡಿ ಹಣ ನೀಡಿದ ಕುಟುಂಬಗಳ ಅಳಲು.– 🔴ನಿಜವಾದ ನಿವೇಶನ ರಹಿತರಿಗೆ ಅವಕಾಶ ಸಿಗಲಿಲ್ಲ ಎಂಬ ಆರೋಪ.. 🔴ಹಣದ ವಿಚಾರ ಯಾರಿಗಾದರೂ ಹೇಳಿದರೆ ನಿವೇಶನ ಕಳೆದುಕೊಳ್ಳುವ ಬೆದರಿಕೆ..

Leave a Reply

Your email address will not be published. Required fields are marked *

error: Content is protected !!