ಅಫ್ ರೋಡ್ ಮಾಡಿ ಪ್ರಾಣಿ ಸಂಕುಲ ಹಾಗೂ ಅರಣ್ಯ ಹಾನಿ ಮಾಡುತ್ತಿದ್ದ ವಾಹನಗಳನ್ನು ಅಮಾನತು ಮಾಡಿ ವಶಕ್ಕೆ ತೆಗೆದುಕೊಂಡು ಅರಣ್ಯ ಅಧಿಕಾರಿಗಳು

ಮಾನ್ಯ ಸಕಲೇಶಪುರ ವಲಯ ಅರಣ್ಯ ಅಧಿಕಾರಿಗಳ ಮಾಹಿತಿಯಂತೆ ದಿನಾಂಕ 01.08.2026 ರಂದು ಸಕಲೇಶಪುರ ವಲಯದ ಕಬ್ಬಿನಾಲೆ ಶಾಖೆಯ ಕಬ್ಬಿನಾಲೆಗಸ್ತಿ ಗೆ ಒಳಪಡುವ ಹೊಡಚಳ್ಳಿ ಗ್ರಾಮದ ಪರಿಭಾವಿತ ಅರಣ್ಯ ಪ್ರದೇಶದ ಸರ್ವೇ ನಂಬರ್ 20,21,28 ರಲ್ಲಿ ಬೆಂಗಳೂರಿನ ಪ್ರವಾಸಿಗರು ಅಕ್ರಮವಾಗಿ ಅರಣ್ಯವನ್ನು ಪ್ರವೇಶಿಸಿ 07 ಮಹೀಂದ್ರ ಜೀಪ್ ಗಳಲ್ಲಿ ಆಫ್ ರೋಡ್ ಮಾಡಿ ಪ್ರಾಣಿ ಸಂಕುಲ ಹಾಗೂ ಅರಣ್ಯಕ್ಕೆ ಹಾನಿ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಸದರಿ ವಾಹನಗಳನ್ನು ಅಮಾನತು ಪಡಿಸಿಕೊಂಡು ವಲಯ ಅರಣ್ಯಾಧಿಕಾರಿಗಳ ಕಛೇರಿಗೆ ಸಾಗಿಸಿ, ಅರಣ್ಯ ಮೊಖದ್ದಮೆ ಸಂಖ್ಯೆ-17/2026-27 ಯನ್ನು ದಾಖಲಿಸಲಾಯಿತು. ಸದರಿ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ಮಂಜುನಾಥ್,ಅರ್ಜುನ್, ಮಹದೇವಪ್ಪ ಹಾಗೂ ಗಸ್ತು ಅರಣ್ಯ ಪಾಲಕರಾದ ಯೋಗೀಶ್,ದೇವರಾಜು, ಉಮೇಶ್, ದೇವೇಂದ್ರ ಹಾಗೂ ಅರಣ್ಯ ವೀಕ್ಷಕರಾದ ಲೋಕೇಶ್ ಬಿ.ಎಂ ಮತ್ತು ಆರ್ .ಆರ್ .ಟಿ ಸಿಬ್ಬಂದಿಗಳಾದ ಅಶ್ವಥ್, ನಿತಿನ್,ಆಶ್ರಯ್ ಮದನ್ ಹಾಗೂ ವಾಹನ ಚಾಲಕರಾದ ಸೋಮಶೇಖರ್ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!