
ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದ ಧರ್ಮ ಶೆಟ್ಟಿ ಸುಮಾರು 50 ವರ್ಷ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಕಳೆದ ಎರಡು ಮೂರು ದಿನಗಳ ಹಿಂದೆ ಕಾಣೆಯಾಗಿದ್ದರು. ಇಂದು ಸಂಜೆ ಮೃತದೇಹ ಕಣಗುಪ್ಪೆ ಬಳಿ ಪತ್ತೆಯಾಗಿದೆ. ಕಳೆದ ಒಂದು ವರ್ಷದಿಂದ ಕಣಗುಪ್ಪೆ ಗ್ರಾಮದ ಬಳಿಯೇ ಕಾಡಾನೆ ಡಾಳಿಗೆ ಮೂರು ಜನ ಬಲಿಯಾಗಿದ್ದಾರೆ. ಆದರೆ ಸರ್ಕಾರವಾಗಲಿ ಜನಪ್ರತಿನಿಧಿಗಳಾಗಲಿ ಜನರ ಜೊತೆ ಚೆಲ್ಲಾಟ ಆಡುತ್ತಿದ್ದಾರೆಂದು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
