
ಸಕಲೇಶಪುರ – ತಾಲ್ಲೂಕಿನ ಹಳೆ ಬಸ್ ಶೆಲ್ಟರ್ ಗೆ ಸಾರ್ವಜನಿಕರು ಟಾರ್ಪಲ್ ಅಳವಡಿಸಿ ಪ್ರಯಾಣಿಕರಿಗೆ ತಾತ್ಕಾಲಿಕ ನೆರವುಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ದಿಂದ ಅಪೂರ್ಣ ಗೊಂಡ ಶೆಲ್ಟರ್ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಕ್ಕೆ ಬೇಸತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸ್ವಂತ ಖರ್ಚಿನಲ್ಲಿ ಶೆಲ್ಟರ್ ಗೆ ಟಾರ್ಪಲ್ ಅಳವಡಿಸಿ ಪ್ರಯಾಣಿಕರಿಗೆ ತಾತ್ಕಾಲಿಕ ನೆರವು ಮಾಡಿ ಕೊಟ್ಟಿದ್ದಾರೆ.ಉಪನೊಂದಣಾಧಿಕಾರಿ ಇಲಾಖೆಗೆ ಸೇರಿದ ಜಾಗದಲ್ಲಿ ನಿರ್ಮಾಣವಾಗುತ್ತಿದ್ದ ಬಸ್ ಶೆಲ್ಟರ್ ಕಾರಣಾಂತರದಿಂದ ಅಭಿವದ್ಧಿ ಸ್ಥಗಿತಗೊಂಡಿದೆ. ಸಾರ್ವಜನಿಕರ ಬಳಕೆಗೆ ಮುಕ್ತಿಗೊಳಿಸದ ಕಾರಣ ಶಾಲಾ ಮಕ್ಕಳಿಗೆ ಮತ್ತು ಮಹಿಳೆಯರು, ವೃದ್ದರು ಹಾಗೂ ಪುರುಷ ಪ್ರಯಾಣಿಕರಿಗೆ ಗಾಳಿ ಮತ್ತು ಮಳೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಎಂದು ಸಂಘ ಸಂಸ್ಥೆಗಳ ಪದಾಧಿಕಾರಿಗಳು ದೂರಿದ್ದಾರೆ
