
ಸಕಲೇಶಪುರ ತಾಲೂಕಿನ ಹಲಸುಲಗೆ ಗ್ರಾಮದಲ್ಲಿಸಕಲೇಶಪುರ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಎತ್ತಿನಹೊಳೆ ಯೋಜನೆ ಅಧಿಕಾರಿಗಳು ನಿರ್ಮಿಸಿರುವ ಪೈಪ್ ಲೈನ್ ನಿಂದ ಅಧಿಕ ಮಟ್ಟದ ನೀರು ಸೋರಿಕೆಯಾಗಿದ್ದು, ಅಂದಾಜು ಸುಮಾರು 80 ರಿಂದ100 ಅಡಿ ಯಷ್ಟು ಎತ್ತರಕ್ಕೆ ಚಿಮ್ಮುತ್ತಿದ್ದು,ಸಾಕಷ್ಟು ಪ್ರಮಾಣದಲ್ಲಿ ನೀರು ಅನಾವಶ್ಯಕವಾಗಿ ಪೋಲಾಗುತ್ತಿದ್ದು, ರೈತರ ಜಮಿನಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ತುಂಬ ನೀರು ಹರಿದು ರಸ್ತೆಗೆ ಅಳವಡಿಸಿದ ಜಲ್ಲಿ ಕೊಚ್ಚಿ ಹೋಗಿರುತ್ತದೆ ಹಾಗೂ ರಸ್ತೆಯ ಬದಿ ಡ್ರೈನೇಜ್ ನಲ್ಲಿ ದೊಡ್ಡ ಗಾತ್ರದ ನೀರು ಹರಿದು ಬಂದ ಪರಿಣಾಮ ಭೂ ಸವಕಳಿಯಿಂದಾಗಿ ಮಣ್ಣು ಕೊರೆದು ದೊಡ್ಡಗ್ರಾತದ ಡ್ರೈನೇಜ್ ಉಂಟಾಗಿದೆ,ಹಾಗೂ ಕೆಳ ಪ್ರದೇಶದಲ್ಲಿದ್ದ ಗದ್ದೆ ತೋಟದ ಜಮೀನಿಗೆ ನೀರು ಮತ್ತು ಮಣ್ಣು ನುಗ್ಗಿ ಆಸ್ತಿ-ಪಾಸ್ತಿ ಹಾಳಾಗಿರುತ್ತದೆ, ಹಾಗೆ ಪಕ್ಕದಲ್ಲಿಯೇ ಹೈ ವೋಲ್ಟೇಜ್ ಪವರ್ ಲೈನ್ ಹೋಗಿರುತ್ತದೆ, ಹಾಗೆ ಎಲೆಕ್ಟ್ರಿಕ್ ಕಂಬಗಳು ಕೆಲವು ಬಿದ್ದು ಹೋಗಿರುತ್ತವೆ ಇನ್ನು ಕೆಲವು ಕಂಬಗಳು ರಭಸವಾಗಿ ನೀರು ಹರಿದ ಪರಿಣಾಮ ಸೀತಲ ಕೊಂಡಿರುತ್ತೇವೆ ಈ ಅವೈಜ್ಞಾನಿಕ ಪೈಪ್ ಲೈನ್ ಕಾಮಗಾರಿಯಾಗಿರುವುದನ್ನು ಸಂಬಂಧಪಟ್ಟ ಮೇಲಿನ ಅಧಿಕಾರಿಗಳು ಪರಿಶೀಲನೆ ಮಾಡಿ ಈ ದುರಂತಕ್ಕೆ ಕಾರಣವಾದ ಅವೈಜ್ಞಾನಿಕ ಕಾಮಗಾರಿ ಮಾಡಿರುವ ಅಧಿಕಾರಿಗಳು ಹಾಗೂ ಏಜೆನ್ಸಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿರುತ್ತಾರೆ.
