
ಸಕಲೇಶಪುರ ತಾಲೂಕಿನ ಹೊಂಗಡಹಳ್ಳಗ್ರಾಮ ಪಂಚಾಯತಿ ಅಧ್ಯಕ್ಷರಾದ ವನಜಾಕ್ಷಿ 2019-20ಸಾಲಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿ ಕಾರ್ಯನಿರ್ವಹಿಸಿಕೊಂಡು ಬಂದಿರುತ್ತಾರೆ, ಕಳೆದ 3/26/2026 ಸಭೆ ನಡೆಸಿದ ನಂತರ ಇದುವರೆಗೂ ಒಂದು ಸಭೆಗೂ ನೋಟಿಸ್ ನೀಡಿರುವುದಿಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾವುದೇ ಸದಸ್ಯರ ಸಭೆ ಕರೆದಿರುವುದಿಲ್ಲ ಎಂದು ಅಧ್ಯಕ್ಷರಾದ ವನಜಾಕ್ಷಿ ದೂರಿರುತ್ತಾರೆ. ಕಳೆದ ಐದು ತಿಂಗಳಿನಿಂದ ಒಂದೇ ಒಂದು ಸಭೆಯನ್ನು ಕರೆಯದೆ ಗ್ರಾಮ ಪಂಚಾಯತಿ ಆಡಳಿತದ ಮೇಲೆ ನಿರ್ಲಕ್ಷ್ಯ ತೋರಿರುತ್ತಾರೆ. ಹಾಗೂ ನಿಧಿ ಒಂದು 25 ನೇ ಹಣಕಾಸು ಖರ್ಚು ವೆಚ್ಚ,15ನೇ ಹಣಕಾಸು ಯೋಜನೆ ಅಭಿವೃದ್ಧಿ ಕಾರ್ಯ ಕಾಮಗಾರಿಯ ಆಕ್ಷನ್ ಪ್ಲಾನ್ ಆಗಲಿ, ಕರವಸೂಲಿಯಾಗಲಿ, ಎಲೆಕ್ಟ್ರಿಕಲ್ ಬಿಲ್ ಲೆಕ್ಕಾಚಾರ, ಮತ್ತು ಬಾರಿ ಮಳೆ ಗಾಳಿಯಲ್ಲಿ ಅನಾಹುತ ಸಂಭವಿಸಿದ ತುರ್ತು ಸಂದರ್ಭದಲ್ಲಿ ಖರ್ಚು ವೆಚ್ಚ ಮಾಡಬೇಕಾದ ಯಾವುದೇ ಪಂಚಾಯಿತಿ ಆಡಳಿತ ಲೆಕ್ಕ ಅಧ್ಯಕ್ಷರ ಗಮನಕ್ಕೆ ನೀಡದೆ ಫೋನ್ ಕರೆಗೂ ಸ್ಪಂದಿಸದೆ ಅಧ್ಯಕ್ಷರಾದ ನನ್ನ ಮೇಲೆ ಪಿಡಿಒ ನಿರ್ಲಕ್ಷ್ಯ ತೋರಿರುವುದಾಗಿ ವನಜಾಕ್ಷಿ ತಿಳಿಸಿರುತ್ತಾರೆ. ಇದರಿಂದಾಗಿ ಗ್ರಾಮದ ಅಭಿವೃದ್ಧಿ ಕಾರ್ಯ ಕುಂಠಿತವಾಗುತ್ತಿದ್ದು ಜನಸಾಮಾನ್ಯರಿಗೆ, ಗ್ರಾಮ ಪಂಚಾಯತಿ ಆಡಳಿತ ಸಿಬ್ಬಂದಿಗಳಿಗೆ, ಸಾರ್ವಜನಿಕರಿಗೆ, ಉತ್ತರಿಸಲು ಕಷ್ಟಕರವಾಗುತ್ತದೆ, ಪ್ರತಿಯೊಂದುಕ್ಕೂ ಪಿಡಿಒ ಹಾಗೂ ಆಡಳಿತ ವರ್ಗದವರೇ ನಿರ್ಣಯ ಕೈಗೊಳ್ಳುವುದಾದರೆ ಜನಪ್ರತಿನಿಧಿ ಏನಕ್ಕೆ ಬೇಕು? ಎನ್ನುವುದು ಅಧ್ಯಕ್ಷರಾದ ನನ್ನ ಪ್ರಶ್ನೆಯಾಗಿದೆ ಎಂದು ವನಜಾಕ್ಷಿ ಆಗ್ರಹಿಸಿರುತ್ತಾರೆ. ಹಾಗೆ ಯಾವುದೇ ಪಕ್ಷ ಬೆಂಬಲಿಸುವ ಪ್ರತಿನಿಧಿಯಾಗಲಿ ಮೊದಲು ಗ್ರಾಮದ ಅಭಿವೃದ್ಧಿ ಬಗ್ಗೆ ಕಾಳಜಿ ಇರಬೇಕೆ ಹೊರತು ಕೆಲವು ಮುಖಂಡರ ಒತ್ತಡಕ್ಕೆ ಒಳಗಾಗಿ ಗ್ರಾಮ ಪಂಚಾಯಿತಿ ಆಡಳಿತ ಕುಗ್ಗಿಸುವುದರಿಂದ ಹೊಂಗಡ ಹಳ್ಳ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಅಭಿವೃದ್ಧಿ ಸಂಪೂರ್ಣ ನಿರ್ಲಕ್ಷದಿಂದ ಸಾಗುತ್ತಿರುವುದು ಬೇಸರದ ಸಂಗತಿ ಯಾಗಿದೆ ಎಂದು ದೂರಿರುತ್ತಾರೆ. ನಾನು ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಕೆಲವು ಮುಖಂಡರು ಅಧಿಕಾರದ ಅವಧಿಯಲ್ಲಿ ಆಡಳಿತದ ಅವಧಿಯಲ್ಲಿ ಅಭಿವೃದ್ಧಿಯ ಬಗ್ಗೆ ಯಾವುದೇ ಲೋಪಗಳು ಕಂಡು ಬಂದಲ್ಲಿ ಸರಿಪಡಿಸಿಕೊಂಡು ಉತ್ತಮ ಆಡಳಿತ ನಿರ್ವಹಣೆಗೆ ಸಹಕರಿಸುತ್ತವೆ ಎಂದವರು ಈ ಸಂದರ್ಭದಲ್ಲಿ ಇರುವುದಿಲ್ಲ, ಆದರೂ ಪಂಚಾಯತಿಂದ ಸಭೆ ನಡೆಸಿರೆ ಪಂಚಾಯತಿ ಅಭಿವೃದ್ಧಿ ಕಾರ್ಯದ ಬಗ್ಗೆ ಕೆಲವು ಮಾಹಿತಿ ಕೇಳುವುದಕ್ಕೂ ಸಭೆ ಕರೆದಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿರುತ್ತಾರೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಬಗ್ಗೆ ಹಾಗೂ ಅಧ್ಯಕ್ಷರ ಮೇಲೆ ನಿರ್ಲಕ್ಷ್ಯ ತೋರುತ್ತಿರುವ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂಜಯ್ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ತಾಲೂಕಿನ ಗಡಿಭಾಗದಲ್ಲಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಬಗ್ಗೆ ಗಮನಹರಿಸಲು ಅಧ್ಯಕ್ಷರಾದ ವನಜಾಕ್ಷಿ ಆಕ್ರೋಶ ವ್ಯಕ್ತಪಡಿಸಿರುತ್ತಾರೆ.
