
ಸಕಲೇಶಪುರ ತಾಲೂಕಿನ ಕಿರೇಹಳ್ಳಿ ಗ್ರಾಮದ ಶೋಭ ಕೆಂಪೇಗೌಡ್ರು ತೋಟ ಹಾಗೂ ಈಶ್ವರ್ ರವರ ಕಾಡಿನಲ್ಲಿ 4 ಆನೆಗಳು ಕಂಡುಬಂದ ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿಗಳಾದ ಹೇಮಂತ್ ಕುಮಾರ್ ದಿನಾಂಕ 10.06.2026 ರಂದು ಬೆಳಗ್ಗೆ ಭೇಟಿ ನೀಡಿ ಕಿರೆಹಳ್ಳಿ,ವಡೂರು, ಕಿರುಹುಣಸೆ, ಗ್ರಾಮದ ಸಾರ್ವಜನಿಕರು ಹಾಗೂ ಕಾಫಿ ತೋಟದ ಕಾರ್ಮಿಕರಿಗೆ ಕಾಡಾನೆಗಳ ಚಲನ ವಲನದ ಬಗ್ಗೆ ಮಾಹಿತಿ ನೀಡಿ ತೋಟಕ್ಕೆ ತೆರಳುವ ಮುನ್ನ ಅರಣ್ಯ ಇಲಾಖೆ ಇಂದ ಮಾಹಿತಿಯನ್ನು ಪಡೆದು ತೆರಳಬೇಕಾಗಿ ಸೂಚಿಲಾಯಿತು, ಹಾಗೂ ಗ್ರಾಮದಲ್ಲಿ ಆನೆಗಳು ಇರುವ ಬಗ್ಗೆ ಧ್ವನಿವರ್ಧಕ ಮೂಲಕ ಪ್ರಚಾರ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಜರಿದ್ದರು.
