




ಸಕಲೇಶಪುರ : ದಿನಾಂಕ 15/ 6/ 2026 ರಂದು ಉಪಅರಣ್ಯ ಸಂರಕ್ಷಣಾಧಿಕಾರಿಗಳು, ಮತ್ತು ಸಹಾಯಕ ಅರಣ್ಯ ಅಧಿಕಾರಿಗಳ ನಿರ್ದೇಶನದಂತೆ ತಾಲೂಕಿನ ಹಾನುಬಾಳು ಹೋಬಳಿ ಕೊಡಚಹಳ್ಳಿ ಗ್ರಾಮದ ಸರ್ವೆ ನಂ 21, 28 ರ ಡೀಮ್ಡ್ ಅರಣ್ಯ 22. 00 ಎಕ್ಕರೆಯಷ್ಟು ವತ್ತುವರಿ ಮಾಡಿದ ಪ್ರದೇಶಕ್ಕೆ ವಲಯ ಅರಣ್ಯ ಅಧಿಕಾರಿಗಳಾದ ಹೇಮಂತ್ ಕುಮಾರ್, ಅರಣ್ಯ ಇಲಾಖೆ ಸಿಬ್ಬಂದಿಗಳು, ಹಾಗೂ ಆರ್ ಆರ್ ಟಿ ಸದಸ್ಯರೊಂದಿಗೆ ಸ್ಥಳೀಯರು ಒತ್ತುವರಿ ಮಾಡಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸ್ಥಳಿಯರು ಅಳವಡಿಸಿದ ಬೀಲಿ ಕಂಬಗಳನ್ನು ಕಿತ್ತುಹಾಕಿ ಒತ್ತುವರಿ ಮಾಡಿದ ಅರಣ್ಯಜಾಗವನ್ನು ವಶಪಡಿಸಿ ಕೊಂಡಿರುತ್ತಾರೆ. ಸ್ಥಳೀಯರು ಡಿಮ್ಡ್ ಅರಣ್ಯ ವತ್ತು ವರಿ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಆಕ್ರೋಶ ವ್ಯಕ್ತಪಡಿಸಿ ತಂತಿ ಬೇಲಿ ಕೀಳದಂತೆ ಅಡ್ಡಿಪಡಿಸಿ ಜಗಳ ಮಾಡಿರುವ ಬಗ್ಗೆ , ನಗರ ಪೊಲೀಸ್ ಠಾಣೆಗೆ ದೂರು ನೀಡಿರುವುದು ವಲಯ ಅರಣ್ಯ ಅಧಿಕಾರಿಗಳು ತಿಳಿಸಿರುತ್ತಾರೆ. ತಂತಿ, ಕಂಬ ವನ್ನು ವಸಡಿಸಿಕೊಂಡಿರುವುದಾಗಿ ತಿಳಿಸಿರುತ್ತಾರೆ.
