

ಸಕಲೇಶಪುರ :- ಸಕಲೇಶಪುರ ತಾಲೂಕು ಮಾರನಹಳ್ಳಿಯ ಕೆಂಪು ಹೊಳೆ ಮೀಸಲು ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಮೀಸಲು ಅರಣ್ಯ ಗಡಿ ಭಾಗದ ಸರ್ವೇ ನಂಬರ್ 401 ರಿ ಸ್ಥಳದಲ್ಲಿ ಹೋಟೆಲ್ ಮಾಲೀಕ ಗಿರೀಶ್ ಎಂಬುವರು ಪಕ್ಕದಲ್ಲೇ ಇದ್ದ ಅರಣ್ಯ ಜಾಗಕ್ಕೆ ಮಣ್ಣನ್ನು ತುಂಬಿಸಿ ಸುಮಾರು 5 ಗುಂಟೆ ಅರಣ್ಯ ಜಾಗವನ್ನು ಒತ್ತುವರಿ ಮಾಡಿದ್ದರು. ಇದನ್ನು ಗಮನಿಸಿದ ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಗಿರೀಶ್ ರವರಿಗೆ ಕಾನೂನು ನಿಯಮಗಳನ್ನು ತಿಳಿಸಿ, ಹಸಿರು ಹಾಸನ ಅಭಿಯಾನದ ಅಡಿಯಲ್ಲಿ ವಿವಿಧ ಸಸಿಗಳನ್ನು ಸ್ವತಃ ಗಿರೀಶ್ ರವರಿಂದ ನೆಡುವುದರ ಮೂಲಕ ಒತ್ತುವರಿ ಜಾಗವನ್ನು ತೆರವುಗೊಳಿಸಲಾಯಿತು. ಇಂತಹ ಘಟನೆಗಳು ಮಳೆಗಾಲದಲ್ಲಿ ಹೆಚ್ಚಾಗುವುದರಿಂದ ಸಿಬ್ಬಂದಿಗಳಿಗೆ ಎಚ್ಚರಿಕೆಯಿಂದ ಗಸ್ತು ತಿರುಗಲು ತಿಳಿಸಿದರು.
