ಡಾಲರ್ಸ್ ಕಾಲೋನಿಯಲ್ಲಿ ಮಾದಿಗ ಸಮುದಾಯದವರು ನಿರ್ಮಿಸಿರುವ ಶೆಡ್ಡುಗಳು ಧ್ವಂಸ

ಸಕಲೇಶಪುರ: ಪಟ್ಟಣದ ಬಸವನಹಳ್ಳಿ ಗ್ರಾಮ ವ್ಯಾಪ್ತಿಯ ಡಾಲರ್ಸ್ ಕಾಲೋನಿ ಪಕ್ಕದಲ್ಲಿರುವ ಪ್ರದೇಶದಲ್ಲಿ, ಸರ್ಕಾರ ಹರಿಜನ  ಕೇರಿಗೆ ಮೀಸಲಾಗಿ  20 ಗುಂಟೆ ಜಾಗವನ್ನು  ಕಾಯ್ದಿರಿಸಿದ್ದ  ಪ್ರದೇಶದಲ್ಲಿ ಸ್ಥಳೀಯ  ನಿವೇಶನ ರಹಿತ ಮಾದಿಗ ಸಮುದಾಯದ ಕುಟುಂಬಗಳು ಸೆಡ್ ನಿರ್ಮಿಸಿಕೊಂಡು ವಾಸ ಮಾಡಲು ಮುಂದಾದ ಸಂದರ್ಭದಲ್ಲಿ ಇವರ ಮೇಲೆ ಲೇಔಟ್ ನವರು ಹಾಗೂ ಪಕ್ಕದ ಸ್ಥಳೀಯ  ವ್ಯಕ್ತಿ  ಇವರನ್ನು ಇಲ್ಲಿಂದ ತೆರವುಗೊಳಿಸುವ ಸಲುವಾಗಿ ಇವರ ಮೇಲೆ ಇಲ್ಲಸಲ್ಲದ ಆರೋಪಮಾಡಿ ಇವರ ಮೇಲೆ ಕೇಸು ದಾಖಲಿಸಿ ಇವರ ಪರ ಹೋರಾಟ ಮಾಡುವವರ ಮೇಲು ಸಹ   ಕೇಸ್ ದಾಖಲಿಸಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ಗುಂಡಾಗಳಿಗೆ ಸುಪಾರಿ ನೀಡಿ   ದಿನಾಂಕ 25.05.2026 ರಾತ್ರಿ ವೇಳೆ ಸೆಡ್  ಗಳನ್ನು ಹಾಕಿ ಸ್ಟಿಕ್ ಮತ್ತು ಲಾಂಗು ಹಿಡಿದು  ಧ್ವಂಸಗೊಳಿಸಿತ್ತಾರೆ ಎಂದು ಬಹುಜನ  ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಹರೀಶ್ ಅತ್ನಿ ಆಕ್ರೋಶ ವ್ಯಕ್ತಪಡಿಸಿರುತ್ತಾರೆ. ಹಾಗೂ ಈ ಜಾಗದ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಮಾನ್ಯ ಉಪ ವಿಭಾಗಾಧಿಕಾರಿಗಳಿಗೆ ಮನವಿ ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿ ತಾಲೂಕು ಅಧ್ಯಕ್ಷರಾದ ವೀರೇಶ್ ಕಲ್ಗಣೆ ಸೇರಿದಂತೆ ಮಾದಿಗ ಸಮುದಾಯದ ಮುಖಂಡರು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!