
ಸಕಲೇಶಪುರ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಎತ್ತಿನಹೊಳೆ ಯೋಜನಾ ಇವರ ಯೋಜನಾ ವ್ಯಾಪ್ತಿಯಲ್ಲಿ ಬರುವ ಹಲವಾರು ಗ್ರಾಮಗಳು ಸೇರಿದಂತೆ ಹಾನುಬಾಳು, ಹೆತ್ತೂರು ಎಸಳೂರು, ಬೆಳಗೋಡು ವಿವಿಧ ಹಳ್ಳಿಗಳ ರಸ್ತೆಗಳು ಮಳೆಯ ಅತಿವೃಷ್ಟಿಯಿಂದ ಸಂಪೂರ್ಣವಾಗಿ ಹಾಳಾದ ಕಾರಣ 28/8/2024ನೇ ಸಾಲಿನಲ್ಲಿ ಹಾಸನ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು ಮತ್ತು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಬಿ ಭಾಸ್ಕರ್ ರವರು ಈ ಭಾಗದ ಗ್ರಾಮೀಣ ಪ್ರದೇಶದ ರೈತರು ಹಾಗೂ ಸಾರ್ವಜನಿಕರು ಸರಿಯಾದ ರಸ್ತೆ ಇಲ್ಲದೆ ಪರದಾಡುತ್ತಿದ್ದ ಸಂದರ್ಭದಲ್ಲಿ ಎತ್ತಿನಹೊಳೆ ಯೋಜನಾ ವ್ಯವಸ್ಥಾಪಕ ನಿರ್ದೇಶಕರ ಮುಖೇನ ಸರ್ಕಾರದ ಗಮನಕ್ಕೆ ತಂದು ಈ ಭಾಗದ ಗ್ರಾಮೀಣ ಪ್ರದೇಶದ ರೈತರು ಹಾಗೂ ಸಾರ್ವಜನಿಕರ ರಸ್ತೆ ಸಮಸ್ಯೆ ಬಗೆಹರಿಸಲು ಸುಮಾರು 10 ಕೋಟಿ ರೂ ಗಳಿಗೂ ಅಧಿಕಾರ ಹಣ ಬಿಡುಗಡೆಗೊಳಿಸಿ ಈಗಾಗಲೇ ಅಗ್ನಿ ಜಂಕ್ಷನ್ ನಿಂದ ಮರಗಿಡಿ ಕಾಂಕ್ರೀಟ್ ರಸ್ತೆ, ಅಗ್ನಿ ಜಂಕ್ಷನ್ ನಿಂದ ಬಾಚನಹಳ್ಳಿ ದೋಣಹಳ್ಳಿ ರಸ್ತೆ, ಹೆಬ್ಬಸಾಲೆಯಿಂದ ದೇವಿಹಳ್ಳಿ ರಸ್ತೆ, ಅಗ್ನಿ ಜಂಕ್ಷನ್ ಇಂದ ಗುಡ್ಡದ ಮಠ ಮಲ್ಲದಿಣ್ಣೆ ರಸ್ತೆ , ಅಚ್ಚನಹಳ್ಳಿ ಮೇನ್ ರೋಡ್ ಬಿಳಿಸಾರೆ ಕಾಲೋನಿ ಬಸವನಗುಡಿ ರಸ್ತೆ, ಹಾನುಬಾಳು ದೇವಲಕೆರೆ ಮುಖ್ಯ ರಸ್ತೆ ಹಾಗೂ ಗುಂಡು ಬ್ರಹ್ಮ ದೇವಸ್ಥಾನ ರಸ್ತೆ ಸೇರಿದಂತೆ ಈಗಾಗಲೇ ಕೆಲವು ರಸ್ತೆಗಳು ಪೂರ್ಣಗೊಂಡಿದ್ದು, ಕೆಲವು ರಸ್ತೆ ಪ್ರಗತಿಯಲ್ಲಿ ರುವುದಲ್ಲದೆ ಇನ್ನು ರಸ್ತೆಗಳ ಅಭಿವೃದ್ಧಿಗಾಗಿ ಹಣ ಬಿಡುಗಡೆಗೊಂಡು ಅಂದಾಜು ಪಟ್ಟಿ ತಯಾರಾಗುತ್ತಿದ್ದು ಉಳಿದ ಹೋಬಳಿವಾರು ಕೆಲವು ರಸ್ತೆಗಳು ಕೂಡ ಮಾಡುವುದಾಗಿ ತಿಳಿಸಿರುತ್ತಾರೆ. ಹಾನುಬಾಳು ಹೆಚ್ ಬಿ ಭಾಸ್ಕರ್ ರವರು ಯಾವುದೇ ಸಭೆ ಸಮಾರಂಭದ ವೇದಿಕೆಯಲ್ಲಿ ಸಾರ್ವಜನಿಕರಿಗೆ ಆಶ್ವಾಸನೆ ನೀಡದೆ ನಿಸ್ವಾರ್ಥ ಸೇವೆ ಮಾಡುತ್ತಾ ಬಂದಿರುತ್ತಾರೆ ಹಾಗೂ ಇವರು ಸಾಮಾಜಿಕ ಹೋರಾಟಗಾರರು ಹಾಗೂ ಈ ಭಾಗದ ನಿಷ್ಠಾವಂತ ನಾಯಕರು ಆಗಿರುತ್ತಾರೆ.
