
ಸಕಲೇಶಪುರ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಕೆ ಎಸ್ ರವರು ಕರ್ತವ್ಯದಲ್ಲಿದ್ದಾಗ ನಗರ ಠಾಣಾ ವ್ಯಾಪ್ತಿಯ ಸಕಲೇಶಪುರ ಟೌನ್ ಗುರುದೇವ ಪೆಟ್ರೋಲ್ ಬಂಕ್ ಬಳಿ ಇರುವ ನಾಗ್ ಎನ್ಕ್ಲೇವ್ ಲೇಔಟ್ ಬಳಿ ಕೊಡಗು ಮೂಲದ ಅಜರುದ್ದೀನ್ ಎಂಬ ವ್ಯಕ್ತಿ ತನ್ನ ಕಾರಿನಲ್ಲಿ ಅಮಲ ಬರುವಂತಹ ಮಾದಕ ಪದಾರ್ಥವಾದ MDMA ಅನ್ನು ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ತನ್ನ ಬಳಿ ಇಟ್ಟುಕೊಂಡಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇಲೆ ದಾಳಿ ಮಾಡಿ ಆರೋಪಿ ಮತ್ತು 2.5 ಲಕ್ಷ ರೂಪಾಯಿ ಮೌಲ್ಯದ 25 ಗ್ರಾಂ MDMA ಮಾದಕ ವಸ್ತುವನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ. ಸದರಿ ಪ್ರಕರಣವನ್ನು ಸಕಲೇಶಪುರ ನಗರ ಪೊಲೀಸ್ ಇನ್ಸ್ಪೆಕ್ಟರ್ ವನರಾಜು ರವರ ಮಾರ್ಗದರ್ಶನದಲ್ಲಿ ಅಪರಾದ ವಿಭಾಗದ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ ರವರು ಮತ್ತು ಸಿಬ್ಬಂದಿಗಳಾದ ಖಾದರ್ ಅಲಿ, ರೇವಣ್ಣ ಎಸ್ ಜೆ , ಶ್ರೀಧರ್, ರಾಕೇಶ್, ಸೋಮಶೇಖರ್, ಅಶೋಕ್, ಸುನಿಲ್ ಕುಮಾರ್, ಹನುಮಂತು, ಶಿವಕುಮಾರ್ ಮತ್ತು ಡ್ರೈವರ್ ಮಧು ಭಾಗವಿಸಿದ್ದರು.
