*ಗೌರ್ನಮೆಂಟ್ ಪ್ರೋಟೋಕಾಲ್  ಇಲ್ಲದೆ ಸ್ಥಾಪನೆಗೊಂಡಿರುವ  ಘನ  ತ್ಯಾಜ್ಯ  ವಿಲೇವಾರಿ ಘಟಕ*   *ನಟ ಚೇತನನ್ ಅಹಿಂಸಾ*

Oplus_131072

ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದ ಘನ ತ್ಯಾಜ್ಯ ವಿಲೇವಾರಿ ಘಟಕದ ಸ್ಥಾಪನೆಗೊಂಡಿರುವ ಸ್ಥಳಕ್ಕೆ ಚಿತ್ರನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಭೇಟಿ ನೀಡಿ ಮಾತನಾಡಿದ ಅವರು 2002 ರಿಂದ ಗ್ರಾಮಸ್ಥರ ವಿರೋಧವಿದ್ದರು ಅವಜ್ಞಾನಿಕವಾಗಿ ಕಸ ವಿಲೆವರಿಗೆ ಸಂಬಂಧಪಟ್ಟ ಹಾಗೆ ಬಫರ್ ಜೂನ್ ಎಂಬ ಸ್ಪರ್ಧೆ ಬಹಳ ವರ್ಷಗಳಿಂದ ನಡೆಯುತ್ತಿದ್ದು, ಗನ ತ್ಯಾಜ್ಯ ವಿಲೇವಾರಿ ಘಟಕದ ಸುತ್ತ ವಾಸದ ಮನೆ ಕುಡಿಯುವ ನೀರಿನ ಸೌಕರ್ಯಗಳಿದ್ದು, ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುತ್ತದೆ. ಪ್ರತಿನಿತ್ಯ ಇಲ್ಲಿ ಸ್ಮೆಲ್ ಹಾಗೂ ಹೊಗೆಯಿಂದ ಪರಿಸರ ಮಾಲಿನ್ಯದಿಂದ ಕೂಡಿರುತ್ತದೆ, ಇದರಿಂದಾಗಿ ಸಾಕಷ್ಟು ಬೇರೆ ಬೇರೆ ಕಾಯಿಲೆಗಳು ಬರುವ ಸಾಧ್ಯತೆ ಇದೆ ಇದು ಒಂದು ರೀತಿ ಗೌರ್ನಮೆಂಟ್ ಪ್ರೋಟೋಕಾಲ್ ಇಲ್ಲದೆ ಸ್ಥಾಪನೆ ಮಾಡಿ ಜನರಿಂದ ವಿರೋಧ ವ್ಯಕ್ತ ವಾಗಿರುತ್ತದೆ ಆದರೂ ಕೂಡ ಆಡಳಿತ ವರ್ಗ, ಆಳುವ ಶಕ್ತಿ ಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ, ಜನರ ಧ್ವನಿ ಕೇಳಿಸಿಕೊಳ್ಳುತ್ತಿಲ್ಲ ಕಿವುಡ ಸರ್ಕಾರ ಎಂದು ಹೇಳಿದರು ಸುಳ್ಳಲ್ಲ ಎಂದರು. ಈ ವಿಚಾರವಾಗಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಘನ ತ್ಯಾಜ್ಯ ವಿಲೇವರಿ ಘಟಕವನ್ನು ಸಂಬಂಧಪಟ್ಟ ಅಧಿಕಾರಿಗಳು ಮರು ಪರಿಶೀಲನೆ ಮಾಡಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಬಗ್ಗೆ ಗೊತ್ತಾದ ಮೇಲೆ ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂಬುದು ನಮ್ಮ ವಾದ ಇದೆ ಎಂದರು. ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಅಕ್ಷತಾ ಕೊಡಗಲವಾಡಿ, ಮುಖಂಡರಾದ ಕಟಕದ್ದೆ ನಾಗರಾಜ್, ಎಎಸ್‌ಎಸ್ ಕೆ ರಾಜ್ಯ ಕಾರ್ಯದರ್ಶಿಗಳು ಹಾಗೂ ಮಲೆನಾಡು ಸಾಮಾಜಿಕ ಸೇವೆ ಸಂಸ್ಥೆಯ ಅಧ್ಯಕ್ಷರಾದ ಸುಧಾಕರ್ ಮಳಲಿ, ಗುರುದೇವ್, ಸೇರಿದಂತೆ ಗ್ರಾಮಸ್ಥರು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!