
ಬೆಳ್ತಂಗಡಿ -ಬೆಳ್ತಂಗಡಿ ತಾಲ್ಲೂಕಿನ ಶಿರ್ಲಾಲು ಗ್ರಾಮ ವ್ಯಾಪ್ತಿಯಲ್ಲಿ ಚುನಾವಣಾ ಮತದಾರರ ಪಟ್ಟಿ ಪರಿಷ್ಕರಿಸುವ ಕರ್ತವ್ಯ ನಿರತ ಪರಿಶಿಷ್ಟ ಜಾತಿಯ B.L.O. ಮಹಿಳೆಯನ್ನು ಅಂಗಳದಲ್ಲಿ ನಿಲ್ಲಿಸಿ ಜಾತಿ ನಿಂದನೆ ಮಾಡಿರುವುದು ಬೆಳಕಿಗೆ ಬಂದಿದೆ. 2025 ರಲ್ಲಿ ಶಿರ್ಲಾಲು ಗ್ರಾಮದ ಅಂಗನವಾಡಿ ಕಾರ್ಯಕರ್ತೆಯಾಗಿ ನೇಮಕಗೊಂಡಿದ್ದು, ಸರ್ಕಾರದ ಆದೇಶದ ಮೇರೆಗೆ S.I.R. ಪ್ರಕ್ರಿಯೆ ಭಾಗವಾಗಿ ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಿಸುವ ಕರ್ತವ್ಯದಲ್ಲಿ ಇದ್ದ ಬಿ. ಎಲ್. ಒ. ಗೆ ಸ್ಥಳೀಯ ಪಲ್ಲದೊಡ್ಡಿ ಎಂಬಲ್ಲಿನ ಮಹಿಳೆ ಜಾತಿ ನಿಂದನೆ ಮಾಡಿ, ಮನೆಯ ಒಳಗೆ ನೀನು ಬರಬಾರದು ಎಂದು ಅವಾಚ್ಯ ಶಬ್ದಗಳಿಂದ ಬೈದು ಅಂಗಳದಲ್ಲಿ ನಿಲ್ಲಿಸಿ ಇರುವುದು ನನ್ನ ಮನಸ್ಸಿಗೆ ನೋವುಂಟು ಮಾಡಿದೆ ಎಂದು ನೊಂದ ಮಹಿಳೆ ತಹಸೀಲ್ದಾರ್ ಮತ್ತು ಪೋಲೀಸ್ ಇಲಾಖೆಯ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
