
ಸಕಲೇಶಪುರ ತಾಲೂಕಿನ ಬಾಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದರ್ಬಾರ್ ಪೇಟೆ ಹುಲಿಯಮ್ಮ ಬಡಾವಣೆ ಮುಖ್ಯ ರಸ್ತೆ ಸಂಪೂರ್ಣವಾಗಿ ಕೆಸರು ಗದ್ದೆಯಂತೆ ಹಾಳಾಗಿದ್ದು, ಹುಲಿಯಮ್ಮ ಬಡಾವಣೆಯಲ್ಲಿ 40 ಕುಟುಂಬಗಳು ವಾಸವಾಗಿದ್ದು, 40 ಕುಟುಂಬಗಳು ದರ್ಬಾರ್ ಪೇಟೆ ಯಲ್ಲಿ ವಾಸವಾಗಿದ್ದು, ಈ ಎರಡು ಗ್ರಾಮಗಳಲ್ಲೂ ಒಂದೇ ಸಮುದಾಯದ ತುಳು ಆದಿ ದ್ರಾವಿಡ ಹಾಗೂ ಮುಗೇರಾ ಸಮುದಾಯದವರು ವಾಸವಾಗಿದ್ದ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ ಭಾಗ್ಯ ಇಲ್ಲದಂತಾಗಿದೆ ಪಕ್ಕದಲ್ಲಿ ಎತ್ತಿನಹೊಳೆ ವಿಶ್ವೇಶ್ವರಯ್ಯ ಜನ ನಿಗಮ ನಿಯಮಿತ ಎತ್ತಿನಹೊಳೆ ಯೋಜನೆ ಹೆಬ್ಬನಹಳ್ಳಿ ಮಾರ್ಗವಾಗಿ ಪೈಪ್ ಲೈನ್ ಹಾಗೂ ಕಾಲುವೆ ಹೋಗಿರುತ್ತದೆ, ಪಕ್ಕದ ಊರಾದ ಮಾಸುವಳ್ಳಿ ದರ್ಬಾರ್ ಪೇಟೆ ಹುಲಿಯಮ್ಮ ಬಡಾವಣೆ ಯಲ್ಲಿ ವಾಸವಾಗಿರುವ ಗ್ರಾಮದ ರಸ್ತೆಯ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳಿಗೆ ಬಡ ಕೂಲಿ ಕಾರ್ಮಿಕರ ಬಗ್ಗೆ ಗಮನ ಇರುವುದಿಲ್ಲ ಚುನಾವಣೆ ಸಮೀಪಿಸಿದಂತೆ ಎಲ್ಲ ಜನ ಪ್ರತಿನಿಧಿಗಳು ಮನೆ ಬಾಗಿಲಿಗೆ ಬರುತ್ತಾರೆ ಈಗ ನಮ್ಮ ಗೋಳು ಕೇಳುವವರು ಯಾರು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿರುತ್ತಾರೆ. ದರ್ಬಾರ್ ಪೇಟೆ ಯುವಕನೊಬ್ಬ ಮೃತಪಟ್ಟ ಹಿನ್ನೆಲೆ ಶವ ಹೊತ್ತುಕೊಂಡು ಸಂಸ್ಕಾರಕ್ಕೆ ಸ್ಮಶಾನಕ್ಕೆ ತೆರಳುವಾಗ ಒಂದು ಕಿಲೋಮೀಟರ್ ನಷ್ಟು ಕೆಸರುಗದ್ದೆಯಂತಾಗಿರುವ ರಸ್ತೆಯಲ್ಲಿ ಹೊತ್ತುಕೊಂಡು ಹೋಗುವ ಪರಿಸ್ಥಿತಿ ಎದುರಾಗಿತ್ತು. ಈ ಗ್ರಾಮದಲ್ಲಿ ಪ್ರತಿ ನಿತ್ಯ ಶಾಲೆ ಮಕ್ಕಳು, ರೈತರು, ಕೂಲಿ ಕಾರ್ಮಿಕರು, ತಿರುಗಾಡುವ ಮಾರ್ಗವಾಗಿದ್ದು, ಯಾರಾದರೂ ಆರೋಗ್ಯ ತಪ್ಪಿದಲ್ಲಿ ಸ್ಥಳಕ್ಕೆ ವಾಹನ ಅಥವಾ ಆಂಬುಲೆನ್ಸ್ ಬಾರದೆ ಒಂದು ಕಿಲೋಮೀಟರ್ ವರೆಗೂ ಹೊತ್ತುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ.ಹಲವು ಬಾರಿ ಶಾಸಕರ ಗಮನಕ್ಕೆ ತಂದರು ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿರುತ್ತಾರೆ. ಇನ್ನಾದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಶಾಸಕರು ಗಮನ ಹರಿಸದಿದ್ದಲ್ಲಿ ಉಗ್ರವಾದ ಹೋರಾಟ ಮಾಡಲು ಮುಂದಾಗುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
