
ಸಕಲೇಶಪುರ ತಾಲೂಕಿನ ಎಸಳೂರು ಹೋಬಳಿ ತಡಕಲು ಗ್ರಾಮದ ಸರ್ವೆ ನಂ 26 ರಲ್ಲಿ 4 ಎಕ್ಕರೆ 24 ಕುಂಟೆ, ಸ ನಂ 44 ರಲ್ಲಿ 3:31 ಕುಂಟೆ ಸ ನಂ 21 ರಲ್ಲಿ 4.38 ಕುಂಟೆ ಜಾಗವನ್ನು ತಡಕಲು ಗ್ರಾಮದ ಗ್ರಾಮಸ್ಥರಿಗೆ ಸರ್ಕಾರ ದಿಂದ ಸ್ಮಶಾನಕ್ಕಾಗಿ ಮೀಸಲಿಟ್ಟಿರುವ ಜಾಗವನ್ನು ಹಾಗೂ ಕೆರೆಯನ್ನು ಸ್ಥಳೀಯ ಪ್ರಭಾವಿ ವ್ಯಕ್ತಿಗಳು ಕಾನೂನು ಬಾಹಿರವಾಗಿ ಸಂಪೂರ್ಣ ಒತ್ತುವರಿ ಮಾಡಿಕೊಂಡು ಆ ಜಾಗದಲ್ಲಿ ತೋಟ ಮಾಡಿರುವುದರಿಂದ ಗ್ರಾಮಸ್ತರಿಗೆ ಶವಸಂಸ್ಕಾರಕ್ಕೆ ಜಾಗಇಲ್ಲದಂತಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕೆಲವು ತಿಂಗಳ ಹಿಂದೆ ತಹಸೀಲ್ದಾರ್ ರವರಿಗೆ ಉಪತಹಸಿಲ್ದಾರ್ ಅವರಿಗೆ ದೂರು ನೀಡಲಾಗಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿ ಇರುವುದಿಲ್ಲ ಆದಕಾರಣ ದಯಮಾಡಿ ಸರ್ಕಾರ ಮೀಸಲಿಟ್ಟಿರುವ ಸಾರ್ವಜನಿಕರ ಸ್ಮಶಾನದ ಜಾಗ ಮತ್ತು ಸರ್ಕಾರಿ ಕೆರೆ ಯನ್ನು ಒತ್ತು ವರಿ ಮಾಡಿರುವವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಿ ಜಾಗ ತೆರವು ಮಾಡಿ ಗ್ರಾಮಸ್ಥರಿಗೆ ಶವಸಂಸ್ಕಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿ ಗ್ರಾಮಸ್ಥರ ಆಕ್ರೋಶವಾಗಿದೆ ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕರುಣಾಕರ್ ಡಿಎಸ್ಎಸ್ ಸಂಚಲಕರದ ಶಿವಕುಮಾರ್ ಇತರರು ಹಾಜರಿದ್ದರು.
