


ಸಕಲೇಶಪುರ – ತಾಲೂಕಿನ ಯಸಳೂರು ಹೋಬಳಿ ಚಂಗಡಿಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿ ಯ ಶಾಂತಳ್ಳಿ ಗ್ರಾಮದಲ್ಲಿ ತಾಲೂಕು ಆಡಳಿತ ಸಕಲೇಶಪುರ ವತಿಯಿಂದ ರೈತರ ಆತ್ಮಹತ್ಯೆ ಆಕಸ್ಮಿಕ ಮರಣ ಹಾಗೂ ಬಣವೆ ನಷ್ಟ ಯೋಜನೆ ಅಡಿ ಸಂತ್ರಸ್ತರಿಗೆ ಮನೆ ಬಾಗಿಲಿಗೆ ಸಮಾಲೋಚನೆಗಾಗಿ ಉಪ ವಿಭಾಗ ಮಟ್ಟದ ಸಮಿತಿಯ ಸಭೆ ಆಯೋಜಿಸಲಾಗಿದ್ದು, ಈ ಸಭೆ ಯಲ್ಲಿ ಮಾನ್ಯ ಉಪವಿಭಾಗಾಧಿಕಾರಿಗಳಾದ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ ಆತ್ಮಹತ್ಯೆ ಮಾಡಿ ಕೊಂಡ 2 ರೈತಕುಟುಂಬಕ್ಕೆ ರೂ 5ಲಕ್ಷ ಹಾಗೂ ಆಕಸ್ಮಿಕ ಮರಣ ಹೊಂದಿದ ರೂ 2 ಲಕ್ಷ ಸಮಿತಿಗೆ ಸಿಫಾರಸ್ಸು ಮಾಡಿರುವುದಾಗಿ ಅಲ್ಲದೆ ಆತ್ಮಹತ್ಯೆ,ಆಕಸ್ಮಿಕ ಮರಣ ಅಥವಾ ಬೆಂಕಿಗಾಹುತಿ ಹೊಂದಿದ ರೈತ ಕುಟುಂಬ ಹೊಲದ ಆವರಣದ ಹಾಗೂ ಅವರ ಮನೆಯ ಬಾಗಿಲಲ್ಲೆ ಸಭೆಯನ್ನು ಆಯೋಜನೆ ಮಾಡಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿ ಆತ್ಮ ವಿಶ್ವಾಸ ಬೆಳೆಸಿಕೊಂಡು ಉತ್ತಮ ಜೀವನ ರೂಪಿಸಿ ಕೊಂಡು ಬದುಕುವ ಬಗ್ಗೆಆತ್ಮಸ್ಥರ್ಯ ತುಂಬಿದರು. ಹಾಗೂ ಸಂತ್ರಸ್ತ ರೈತ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ, ಸರ್ಕಾರಿ ಸೌಲಭ್ಯಗಳು ತಹಸಿಲ್ದಾರ್, ಹಾಗೂ ಕೃಷಿ ಸಲಕರಣೆ ಪಡೆಯಲು ಕೃಷಿ ಅಧಿಕಾರಿಗಳು, ಸಹಯೋಗದಲ್ಲಿ ಪಡೆದು ಕೊಳ್ಳುಲು ತಿಳಿಸಿದರು. ಇದೆ ಸಂದರ್ಭದಲ್ಲಿ ತಹಸಿಲ್ದಾರ್ ಸುಪ್ರಿತ ಕೆಎಸ್, ಸಹಾಯಕ ಕೃಷಿ ನಿರ್ದೇಶಕರದ ಪ್ರಕಾಶ್ ಕುಮಾರ್ ಯು ಎಂ, ಸಹಾಯಕ ನಿಬಂಧಕರ ಮಾರಾಟ ಕಚೇರಿ ಅಧಿಕಾರಿಗಳು, ಯಸಳೂರು ಪೊಲೀಸ್ ಅಧಿಕಾರಿಗಳು, ಯಸಳೂರು ಗ್ರಾಮಸ್ವನಿರೀಕ್ಷಕರು, ಲೆಕ್ಕಾಧಿಕಾರಿಗಳು, ರೈತ ಕುಟುಂಬಗಳು ಗ್ರಾಮಸ್ಥರು, ಇತರರು ಹಾಜರಿದ್ದರು.
