

ಸಕಲೇಶಪುರ ತಾಲೂಕಿನ ಜಂಗಡಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ದೇವರಾಜ್ ಎಂಬ ವ್ಯಕ್ತಿಯನ್ನು ಪಕ್ಕದ ಊರಿನ ನಂದಳ್ಳಿ ಗ್ರಾಮದ ವೆಂಕಟೇಶ್ ಶೆಟ್ಟಿ, ಎಂಬ ವ್ಯಕ್ತಿ ದಿನಾಂಕ 31/6/2026 ರಂದು ಬೈಕ್ ವಿಚಾರವಾಗಿ ಮರಣಾಂತಿಕ ಹಲ್ಲೆ ಮಾಡಿದ್ದು, ಈ ವಿಚಾರವಾಗಿ ಮಗಳಾದ ಮೇಘನಾ ಎಸಳೂರು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿರುವ ವಿಚಾರ ತಿಳಿದು ಗುಡಿಸಲಿನಲ್ಲಿ ಮಗಳಾದ ಮೇಘನ ಹಾಗೂ ಮೊಮ್ಮಗಳು ಇರಬಹುದು ಎಂದು ಹೂಹಿಸಿ ವಸಂತ, ಮತ್ತು ವೆಂಕಟೇಶ್ ಶೆಟ್ಟಿ ಗುಡಿಸಲಿಗೆ ಬೆಂಕಿ ಹಚ್ಚಿ ಪರಾರಿಯಾಗಿರುತ್ತಾರೆ. ಆದರೆ ಮೇಘನಾ ಮತ್ತು ಮಗಳು ಪಕ್ಕದ ಮನೆಗೆ ಹೋಗಿರುವ ಸಂದರ್ಭದಲ್ಲಿ ಘಟನೆ ನಡೆದಿರುತ್ತದೆ, ಆದರೆ ಹಳೆಯ ಸೇಡಿನ ವಿಚಾರವಾಗಿ ಈ ಒಂದು ಕೃತ್ಯ ನಡೆದಿರುವುದಾಗಿ ಮೇಘನಾ ತಿಳಿಸಿರುತಾರೆ. ತಂದೆ ದೇವರಾಜ್ ರವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಕಾರಣ ಮಗಳು ಮೇಘನಾ ಮತ್ತು ಮೊಮ್ಮಗಳು ಪಕ್ಕದ ಮನೆಗೆ ಹೋಗಿರುವ ಸಂದರ್ಭದಲ್ಲಿ ಮನೆಯ ಒಳಗೆ ಇರಬಹುದು ಎಂದು ಕೃತ್ಯ ಎಸಿಗಿರುವುದಾಗಿ ಮಗಳಾದ ಮೇಘನಾ ತಿಳಿಸಿರುತ್ತಾರೆ. ಮನೆಯ ಒಳಗಡೆ ಖಾಲಿ ಸಿಲಿಂಡರ್ ಸೀಮೆಎಣ್ಣೆ ಕ್ಯಾನ್ ಇದ್ದು ದೊಡ್ಡ ಗಂಡಾಂತರ ತಪ್ಪಿದಂತಾಗಿದೆ, ಈ ವಿಚಾರವಾಗಿ ಎಸಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಡಿ ವೈ ಎಸ್ ಪಿ ಮಾಲತೇಶ್, ವೃತ ನಿರೀಕ್ಷಕರಾದ ಬಸವಣ್ಣ ಗೌಡ ಪಾಟೀಲ್, ಎಸಳೂರು ಪೋಲಿಸ್ ಸಂಜಯ್, ಹರ್ಷ, ಹಾಗೂ ಬಿ ಕೃಷ್ಣಪ್ಪ ಸ್ತಾಪಿತ ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ವಳಲಹಳ್ಳಿ ವೀರೇಶ್, ಡಿ ಎಸ್ ಎಸ್ ಸಂಚಾಲಕರಾದ ವಸಂತ್ ಹೊಸೂರು, ಡಿಎಸ್ಎಸ್ ತಾಲೂಕು ಸಂಘಟನ ಸಂಚಾಲಕರಾದ ಶಿವಕುಮಾರ್ ತಡಕಲು, ಬಹುಜನ ಸಮಾಜಾ ಪಾರ್ಟಿ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ್ ಕೀರ್ತಿ, ಮುಖಂಡರಾದ ನಲ್ಲೂಲಿ ಈರಪ್ಪ, ತಾಲೂಕು ಅಧ್ಯಕ್ಷರಾದ ವೀರೇಶ್ ಕಲ್ಗಣಿ, ಮುಖಂಡರಾದ ಗಂಗಾಧರ್ ಸೇರಿದಂತೆ ಇತರೆ ಮುಖಂಡರು ಹಾಜರಿದ್ದರು
