ಅಲ್ಪಸಂಖ್ಯಾತ ಮುಖಂಡರಾದ ರಫೀಕ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಬಿ ಜೆ ಪಿ ಸೇರ್ಪಡೆ*

ಸಕಲೇಶಪುರ ತಾಲೂಕು ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಡಕಲು ಮತ್ತು ಕೌಕೋಡಿ‌ ಗ್ರಾಮದಲ್ಲಿ ಆಲೂರು ಕಟ್ಟಾಯ ಸಕಲೇಶಪುರ ವಿಧಾನಸಭಾ  ಕ್ಷೇತ್ರ ಶಾಸಕರಾದ ಸಿಮೆಂಟ್ ಮಂಜುನಾಥ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ   ಅಲ್ಪಸಂಖ್ಯಾತ ಮುಖಂಡರಾದ ರಫೀಕ್ ಸಮ್ಮುಖದಲ್ಲಿ     ಅಲ್ಪಸಂಖ್ಯಾತ ಕುಟುಂಬದ 40 ಸದಸ್ಯರು ಕಾಂಗ್ರೆಸ್  ಪಕ್ಷ  ತೊರೆದು ಬಿಜೆಪಿ   ಪಕ್ಷ ಸೇರ್ಪಡೆಗೊಂಡರು. 

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮುಖಂಡರಾದ  ಡಿ ಎಸ್ ಎಸ್  ತಾಲೂಕು ಸಂಚಾಲಕರಾದ  ಶಿವಕುಮಾರ್ ತಡಕಲು, 

 ಸಕಲೇಶಪುರ ಮಂಡಲ ಬಿಜೆಪಿ ಅಧ್ಯಕ್ಷರಾದ ವಳಲಹಳ್ಳಿ ಅಶ್ವತ್ ರವರು, ಯಸಳೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸವಿನ್ ರವರು, ಎಸ್.ಸಿ ಮೋರ್ಚಾ ಮಂಡಲ ಅಧ್ಯಕ್ಷರಾದ ಸ್ಟೀವನ್ ಪ್ರಕಾಶ್, ಸ್ಥಳೀಯ  ಮುಖಂಡರಾದ  ಪುಟ್ಟಸ್ವಾಮಿಗೌಡ್ರು , ಶಿವಕುಮಾರ್ ತಡಕಲು  ದಿನೇಶ್ ಕೌಕೋಡಿ, ಪರಮೇಶ್, ತಾಲೂಕ್ ಎಸ್ ಸಿ ಮೋರ್ಚ ಉಪಾಧ್ಯಕ್ಷ  ಮಧು ನಾಗನಹಳ್ಳಿ,  ಮುಖಂಡರಾದ ಫಾರೂಕ್, ಆದಮ್,ಸರಿಫ್, ರಿಜ್ವಾನ್, ದೊಡ್ಡಯ್ಯ ಸೇರಿದಂತೆ ಮುಖಂಡರು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!