ಗ್ರಾಮೀಣ ಡಿಜಿಟಲ್ ಸ್ಪರ್ಶ : ಕೆಂಚಮ್ಮ ಹೊಸಕೋಟೆ ಶಾಲೆಗೆ ಮೂರು ಲಕ್ಷ ವೆಚ್ಚದ ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡಿದ ಅಂಜಲಿಗೆ ಕಾಳಿಂಗಪ್ಪ ಮಂಜುನಾಥ್.

ವರದಿ : ರಂಜಿತ್ ಕುಮಾರ್ ಅಂಬುಗ

ಆಲೂರು ತಾಲೂಕಿನ ಕೆಂಚಮ್ಮ ಹೊಸಕೋಟೆ ಕೆಪಿಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಕೋಟೆ ಈ ಶಾಲೆಗೆ ಇಂದು ಮಂಜುನಾಥ್ ಕಾಳಿಂಗಪ್ಪ ಅವರು ಈ ವರ್ಷದ ಸ್ಮಾರ್ಟ್ ಕ್ಲಾಸ್ ಅನ್ನು ಕೊಡುಗೆಯಾಗಿ ನೀಡಿ ಉದ್ಘಾಟನೆ ಮಾಡಿದರು.

ಇದು ಇವರ 19ನೇ ಸ್ಮಾರ್ಟ್ ಕ್ಲಾಸ್ ಆಗಿದೆ. 2012ರಲ್ಲಿ ಇವರು ಹುಟ್ಟು ಹಾಕಿದ “ನಮ್ಮ ನಡೆ ಸರ್ಕಾರಿ ಶಾಲೆಯ ಕಡೆಗೆ” ಎಂಬ ಅಭಿಯಾನದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್ ಗಳ ಕೊಡುಗೆ ಕೂಡ ಅತ್ಯುತ್ತಮವಾಗಿದೆ ಸುಮಾರು ಒಂದು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮೊದಲನೇ ತರಗತಿಯಿಂದಲೇ ಬೇಸಿಕ್ ಕಂಪ್ಯೂಟರ್ ಕಲಿಯುವ ವ್ಯವಸ್ಥೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರೊಜೆಕ್ಟರ್ ಮತ್ತು ಲ್ಯಾಪ್ಟಾಪ್ ಗಳನ್ನು ಉಪಯೋಗಿಸಿ ಶಿಕ್ಷಣವನ್ನು ನೀಡುವಂತಹ ವ್ಯವಸ್ಥೆ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಇವರು ಮಾತನಾಡುತ್ತಾ ” ನಮ್ಮ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇರಬಾರದು , ಶಿಕ್ಷಣದ ಗುಣಮಟ್ಟ ಹಾಗೂ ಮಕ್ಕಳ ಕಲಿಕಾ ಮಟ್ಟ ಇಂದಿನ ಡಿಜಿಟಲ್ ಯುಗದಲ್ಲಿ ಅತ್ಯುತ್ತಮವಾದ ಮಟ್ಟ ತಲುಪಬೇಕೆನ್ನುವುದು ನಮ್ಮ ಆಶಯವಾಗಿದೆ. ಆ ಉದ್ದೇಶದಿಂದಲೇ ಆಲೂರು ತಾಲೂಕಿನಲ್ಲಿ 14 ಸ್ಮಾರ್ಟ್ ಕ್ಲಾಸ್ ಗಳು ಪ್ರತಿ 2 ತಿಂಗಳಿಗೊಮ್ಮೆ ಈ ಸ್ಮಾರ್ಟ್ ಕ್ಲಾಸ್ ಗಳಿಗೆ ನಾನೇ ಖುದ್ದಾಗಿ ಭೇಟಿ ನೀಡಿ ಇದರ ಉಪಯೋಗ ಎಲ್ಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ತಲುಪುತ್ತಿದೆ ಎಂದು ನೋಡಿಕೊಳ್ಳುತ್ತಿರುವುದು ತುಂಬಾ ಉಪಕಾರಿಯಾಗಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷರಾದ ಜಯಣ್ಣ ಹೖದೂರು ರವರು ಮಾತನಾಡುತ್ತಾ ” ಮಂಜುನಾಥ್ ಕಾಳಿಂಗಪ್ಪ ರವರನ್ನು ಕಳೆದ ಕೆಲವು ವರ್ಷಗಳಿಂದ ನಾನು ಸೂಕ್ಷ್ಮವಾಗಿ ನೋಡುತ್ತಾ ಬಂದಿದ್ದೇನೆ, ಇವರು ಇಡೀ ಆಲೂರು ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ನೋಟ್ ಪುಸ್ತಕಗಳು ಬ್ಯಾಗುಗಳಷ್ಟೆನ್ನೇ ನೀಡದೆ ಸ್ಮಾರ್ಟ್ ಕ್ಲಾಸ್ ಗಳನ್ನು ಪ್ರಾರಂಭಿಸುವುದು, ಅದರ ಜೊತೆಗೆ ಈ ವರ್ಷ ಗ್ರಾಮೀಣ ಭಾಗದ 10 ಹೆಣ್ಣು ಮಕ್ಕಳಿಗೆ ಸೈಕಲ್ ಗಳನ್ನು ಕೊಡಿಸುವಂತಹ ವ್ಯವಸ್ಥೆ ಮಾಡಿದ್ದಾರೆ. ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ಯಾವ ಸವಲತ್ತುಗಳು ಸಿಗುವುದಿಲ್ಲವೋ ಅವುಗಳನ್ನು ಗುರುತಿಸಿ ಉಚಿತವಾಗಿ ನೀಡುತ್ತಾ ಬಂದಿರುವುದು ಇವರ ವಿಶೇಷ ಅದರಲ್ಲೂ ಕಳೆದ 13 ವರ್ಷಗಳಿಂದ ಈ ಕಾಯಕವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಇವರ ಸೇವೆಗೆ ಮತ್ತೊಂದು ಉದಾಹರಣೆ”ಆದರೆ ಇದುವರೆಗೂ ಜಿಲ್ಲಾ ಶಿಕ್ಷಣ ಇಲಾಖೆಯಾಗಲಿ ಜಿಲ್ಲಾಡಳಿತವಾಗಲಿ ಇವರನ್ನು ಗುರುತಿಸದೆ ಇರುವುದು ನಿಜವಾಗಲೂ ನೋವಿನ ಸಂಗತಿ ಎನಿಸುತ್ತದೆ. ಇಂಥಹ ಶಿಕ್ಷಣ ಪ್ರೇಮಿಯನ್ನು, ಸರ್ಕಾರಿ ಶಾಲೆಗಳ ಉಳಿವಿಗೆ ಹೋರಾಡುತ್ತಿರುವವರನ್ನು, ಯಾವುದೇ ಫಲಾಪೇಕ್ಷೇ ಇಲ್ಲದ ಇವರ ಕೊಡುಗೆಯನ್ನ ಶಿಕ್ಷಣ ಸಚಿವರಿಗಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಇವರನ್ನು ಗಮನಕ್ಕೆ ತರದಿರುವುದು ಎಷ್ಟರಮಟ್ಟಿಗೆ ಸರಿ” ಎಂದು ಬೇಸರ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಫಾದರ್ ಮುಲ್ ವೈದೇಧಿಕಾರಿ ಲಕ್ಷಣ ಗಂಗಾ ಶಾಲಾ ಮುಖ್ಯೋಪಾಧ್ಯಾಯರ ಜೊತೆ ಶಾಲೆಯಲ್ಲಾ ಶಿಕ್ಷಕರು ಎಸ್ ಡಿ ಎಂ ಸಿ ಅಧ್ಯಕ್ಷರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!