ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ 76 ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಬೇಲೂರು – ಬೇಲೂರು ತಾಲ್ಲೂಕಿನ ಅರೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಏರ್ಪಡಿಸಲಾಗಿತ್ತು.ಅಧ್ಯಕ್ಷರಾದ ನಾಗೇಶ್ ಶೆಟ್ಟಿ, ಶ್ರೀ ನಾಗರಾಜ್ ಎಂ.ಎ. ಸೋಮನಹಳ್ಳಿ ನಾಗರಾಜ್ ಅವರು ಉದ್ಘಾಟಿಸಿದರು.ನಂತರ ರೈತರನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ನಾಗೇಶ್ ಶೆಟ್ಟಿ ಅವರು ಮುಂದಿನ ದಿನಗಳಲ್ಲಿ ಸ್ವಸಹಾಯ ಸಂಘಗಳಿಗೆ ಸಾಲ ನೀಡಲು ಚಿಂತನೆ ನಡೆಸಲಾಗಿದೆ ಎಂದರು. ಮತ್ತು ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಸಾಲ, ಹಾಗೂ ರೈತರಿಗೆ ಅನುಕೂಲ ಆಗುವಂತೆ ಎಲ್ಲಾ ರೀತಿಯ ರಸಗೊಬ್ಬರ ಕಡಿಮೆ ದರದಲ್ಲಿ ನೀಡಲಾಗುವುದು, ಇದರ ಸದುಪಯೋಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆಸಿಕೊಳ್ಳಬೇಕು ಎಂದರು.ಎಂ.ಎ. ನಾಗರಾಜ್ ಅವರು ಮಾತನಾಡಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೋನ್ನಚಾರ್ ಇದ್ದಂತಹ ಸಂದರ್ಭದಲ್ಲಿ ಈ ಸಹಕಾರ ಸಂಘ ಸಾಲದ ಹೊರೆಯಲಿತ್ತು. ಈಗ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಷೇರುದಾರರ ಸಂಖ್ಯೆ ಹೆಚ್ಚಾಗಿ ಹೆಚ್ಚಿನ ಅನುದಾನ ತರಲು ಸಹಕಾರಿ ಆಗುವರೆಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಸೋಮನಹಳ್ಳಿ ನಾಗರಾಜ್ ಅವರು ಮಾತನಾಡಿ ಪ್ರತಿ ವರ್ಷ ಸುಮಾರು 5 ಸಾವಿರ ಕೋಟಿ ಸಾಲವನ್ನು ಜಿಲ್ಲೆಯಾದ್ಯಂತ ಕೊಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಶ್ರೀ ಸೋಮನಹಳ್ಳಿ ನಾಗರಾಜ್, ಅಧ್ಯಕ್ಷರು ಹಾ. ಜಿ. ಸ . ಕೇಂದ್ರ ಬ್ಯಾಂಕ್ ಹಾಸನ. ಶ್ರೀ ನಾಗರಾಜ್ ಎಂ. ಎ. ನಿರ್ದೇಶಕರು ಹಾಸನ. ಶ್ರೀ ನಾಗೇಶ್ ಶೆಟ್ಟಿ, ಅಧ್ಯಕ್ಷರು ಅರೇಹಳ್ಳಿ, ಶ್ರೀ ಜಿ . ಹೆಚ್. ಚನ್ನಕೇಶವ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅರೇಹಳ್ಳಿ. ಶ್ರೀ ಮತಿ ಗಾಯಿತ್ರಿ ಉಪಾಧ್ಯಕ್ಷೆ ಅರೇಹಳ್ಳಿ, ಶ್ರೀ ತುಳಸಿ ದಾಸ್ ನಿರ್ದೇಶಕರು. ಶ್ರೀ ಚಂದ್ರಶೇಖರ್. ವಿ. ಆರ್. ನಿರ್ದೇಶಕರು. ಶ್ರೀ ನಿಂಗರಾಜು ನಿರ್ದೇಶಕರು. ಶ್ರೀ ಅನಂತ್ ರಾಜ್ ನಿರ್ದೇಶಕರು. ಶ್ರೀ ಅಣ್ಣಪ್ಪ ನಿರ್ದೇಶಕರು. ಶ್ರೀ ಸುಹೀಲ್ ವುರ್ ರೆಹಮಾನ್ ನಿರ್ದೇಶಕರು. ಶ್ರೀ ಕೆ. ಬಿ. ಪುಟ್ಟರಾಜು ನಿರ್ದೇಶಕರು. ಶ್ರೀ ಮತಿ ಪದ್ಮಾ ನಿರ್ದೇಶಕರು. ಶ್ರೀ ಹೇಮರಾಜ್ ನಿರ್ದೇಶಕರು. ಶ್ರೀ ಹರೀಶ್ ಬ್ಯಾಂಕಿನ ಪ್ರತಿನಿಧಿ ಬೇಲೂರು. ಹಾಗೂ ಎಲ್ಲಾ ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!