
ಮಾಜಿ ಪ್ರಧಾನ ಮಂತ್ರಿಗಳು ಹಾಸನ ಜಿಲ್ಲೆಯ ಮಣ್ಣಿನ ಮಗ ಹೆಚ್ ಡಿ ದೇವೇಗೌಡ ರವರ ಧರ್ಮಪತ್ನಿ ಚೆನ್ನಮ್ಮ ವಿಧಿವಶರಾಗಿದ್ದು, ಬಹಳ ತೀವ್ರವಾದ ದುಃಖವಾಗಿದೆ ಅವರನ್ನು ಸುಮಾರು 45 ವರ್ಷಗಳ ಕಾಲ ತುಂಬಾ ಹತ್ತಿರದಿಂದ ಬಲ್ಲವರಾಗಿದ್ದು, ಚೆನ್ನಮ್ಮನವರ ಪತಿ ಎಚ್ ಡಿ ದೇವೇಗೌಡರು ಲೋಕಸಭಾ ಸದಸ್ಯರಾಗಿದಾಗ, ಶಾಸಕರಾಗಿದಾಗ, ಮುಖ್ಯಮಂತ್ರಿಯಾಗಿದಾಗ, ಪ್ರಧಾನಮಂತ್ರಿಯಾಗಿದ್ದಾಗ, ಎಲ್ಲಾ ಕಾಲದಲ್ಲೂ ಕೂಡ ನಾನೊಬ್ಬ ರಾಜಕಾರಣಿಯ ಪತ್ನಿ ಅಥವಾ ಪ್ರಧಾನಿಯ ಪತ್ನಿ ಎಂದು ತೋರಿಸಿಕೊಂಡಂತಹ ದಿನಗಳೇ ಇಲ್ಲ ನಾವು ಅವರ ಮನೆಗೆ ಹೋಗುತ್ತಾ ಬರುತ್ತಾ ಇರುವ ಸಂದರ್ಭದಲ್ಲಿ ಮನೆಗೆ ಬಂದವರಿಗೆ ಏನಪ್ಪ ಬಂದೆ ಕುಳಿತುಕೊಳ್ಳಲು ಹೇಳಿ ಆದಿತ್ಯ ನೀಡುತ್ತಿದ್ದಂತಹ ಮಹಾತಾಯಿ ನಾವು ಅಂತಹ ಒಂದು ಅದೃಷ್ಟವನ್ನು ಕಳೆದುಕೊಂಡಿದ್ದೇವೆ. ದೇವೇಗೌಡ ಕುಟುಂಬಕ್ಕೆ ಮತ್ತು ನಮಗೆ ಆಗಿರುವ ನಷ್ಟ ಮಾತ್ರವಲ್ಲದೆ ಇಡೀ ಜಿಲ್ಲೆಗೆ ರಾಜ್ಯಕ್ಕೆ ಮತ್ತು ದೇಶಕ್ಕೆ ಆಗಿರುವಂತ ನಷ್ಟವಾಗಿದೆ. ಭಗವಂತ ಅವರನ್ನು ಮತ್ತೆ ಚೆನ್ನಮ ಆಗಿ ಹುಟ್ಟಿಬರುವಂತವರಾಗಿ ಕರುಣಿಸಲಿ ಚೆನ್ನಮ್ಮ ಅವರದು ಪಕ್ಷತೀತ ಮಹಿಳೆಯಾಗಿ, ರಾಜಕೀಯ ರಹಿತ ಮಹಿಳೆಯಾಗಿ, ಈ ನಾಡನ್ನು ಪ್ರೀತಿಸುವಂತಹ ಮಹಿಳೆಯಾಗಿದ್ದರು, ಅಂತಹ ಮಾತೇಯನ್ನು ಕಳೆದುಕೊಂಡ ಈ ದಿನ ತೀವ್ರವಾದ ದುಃಖವಾಗಿದೆ.ಎಂದು ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಬೆಕ್ಕನಹಳ್ಳಿ ನಾಗರಾಜ್ ತನ್ನ ನೋವನ್ನು ಹಂಚಿಕೊಂಡಿರುತ್ತಾರೆ.
