ವರದಿ:- ನಾಗೇಶ್ . ಎಂ.ಎಚ್. ಮಾಗೇರಿ

ಈ ಕಾಮಗಾರಿ ಗೆ ಸಂಬಂಧ ಪಟ್ಟ ಕಂಟ್ರಾಕ್ಟರ್ ಲೈಸೆನ್ಸ್ .ರದ್ದು ಮಾಡುವಂತೆ ಅಧಿಕಾರಿಗಗೆ ಮನವಿ.
ಸಕಲೇಶಪುರ ತಾಲೂಕು ಯಸಳೂರು ಹೋಬಳಿ ಹಿಜ್ಜಿನಹಳ್ಳಿ ಗ್ರಾಮದಲ್ಲಿ ಸಕಲೇಶಪುರ ಮಾಗೇರಿ ಸೋಮವಾರ ಪೇಟೆ ಮಾರ್ಗದ ರಸ್ತೆಯಲ್ಲಿ ಕಿರು ಸೇತುವೆ ಕೆಲಸ ನಡೆಯುತ್ತಿದೆ . ಸುಮಾರು 20 ದಿನಗಳಿಂದ ಕಾಮಗಾರಿ ನಡೆಯುತ್ತಿದೆ. ಆದರೆ ಈ ಭಾಗದಲ್ಲಿ ಹೆಚ್ಚು ಮಳೆ ಆಗುತ್ತಿದ್ದು ಪ್ರತಿ ವರ್ಷ ಇಲ್ಲಿ ಜಲ ಬರಲು ಶುರುವಾಗುತ್ತದೆ. ರಸ್ತೆಯು ಕೊಚ್ಚಿ ಹೋಗುವ ಸಾಧ್ಯತೆ ಹೆಚ್ಚು ಇದಕ್ಕೆ
ಬೇಕಾಗುವ ಮರಳು ಜೆಲ್ಲಿ ಸಿಮೆಂಟ್ ಮಿಶ್ರಣ ನಡೆಯುತ್ತಿಲ್ಲ
ವೈಬ್ರಟಿಂಗ್ ಮಿಷನ್ ಉಪಯೋಗ ಮಾಡದೆ
ಕೆಲಸದವರ ಜೊತೆ ಕೈ ಯಲ್ಲಿ ಮಾಡಿಸುತ್ತಿದ್ದಾರೆ.
ಕಳಪೆ ಮಟ್ಟದ ಕಾಮಗಾರಿ ನಿದಾನ ಗತಿಯಲ್ಲಿ ಸಾಗುತಿದ್ದು ಜನರಿಗೆ ತೊಂದರೆ ಆಗುವ ರೀತಿ ಇದೆ.
ಮಾಗೇರಿ ಗ್ರಾಮದ ಸುತ್ತ ಮುತ್ತ ಇದೆ ರಸ್ತೆಯ ಮಾರ್ಗದಲ್ಲಿ ಸುಮಾರು 40 ಮಕ್ಕಳು ಸೋಮವಾರ ಪೇಟೆ ಮತ್ತು ಬೆಟ್ಟದಹಳ್ಳಿ (ಕಟ್ಟೆ ) ಶಾಲೆಗೆ ಹೋಗಿ ಬರುತ್ತಾರೆ ಇದೆ ರೀತಿ ಕಾಮಗಾರಿ ನಡೆದರೆ ತೊಂದರೆ ಎದುರಿಸಬೇಕು.
*ರಸ್ತೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಕೂಡ ಮಾಡಿಲ್ಲ*.
*ಇಂಜಿನಿಯರ್ ಅನ್ನು ಕೇಳಿದರೆ*
*ಟೆಂಡರ್ ಆಗಿದೆ*
*ಮಳೆಗಾಲದ ಮುಂಚೆ *ಮಾಡಿಸುತ್ತೇವೆ ಎಂದು *ಇಂಜಿನಿಯರ್ ವಸಂತ್* *ಹೇಳುತ್ತಾರೆ*.
*ವಸಂತ ರವರು ಸಾರ್ವಜನಿಕರಿಗೆ*
*ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ*
*ಕೇಳಿ ಬರುತ್ತಿದೆ*.
ರಸ್ತೆ ಬದಿಯ ಚರಂಡಿ ವ್ಯವಸ್ಥೆ ಮತ್ತು ರಸ್ತೆ ಎರಡು ಬದಿ
ಕ್ಲಿನ್ ಮಾಡಿಸುವುದಕ್ಕೆ ಬಿಲ್ ಪಾವತಿಯಾಗಿದೆ.
ಆದರೆ ಕಾಮಗಾರಿ ಮಾತ್ರ ಸರಿಯಾಗಿ ಆಗಿಲ್ಲ.
ಇಂಜಿನಿಯರ್ ” ಕಂಟ್ರಾಕ್ಟರ್” ಗಳು ಸ್ಥಳಕ್ಕೆ ಬರದೆ
ಎಲ್ಲಾ ಕೆಲಸಗಳು ಫೋನ್ ಮುಖಾಂತರ ಸಂಭಾಷಣೆಯಲ್ಲಿ ನಡೆಯುತ್ತಿದೆ.
ಇಲ್ಲಿನ ವಾಸ್ತವ ಅರಿಯದೆ ಕಾಮಗಾರಿ ನಡೆಯಿತ್ತಿದೆ.
*2018 ರಲ್ಲಿ ಇದೆ ರಸ್ತೆ ಇದೆ ಗ್ರಾಮದಲ್ಲಿ ರಸ್ತೆ ಕೊಚ್ಚಿ ಹೋಗಿ*
*ಇಲ್ಲಿನ ಜನರು ಮನೆ ಮಠ ಬಿಟ್ಟು* *ಗಂಚಿ ಕೇಂದ್ರಲ್ಲಿ ವಾಸ ಮಾಡಿ ದ್ದರು*.
*ಅದೇ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ*
ಇಂಜಿನಿಯರ್ ” ಕಂಟ್ರಾಕ್ಟರ್”
ಕೊಡಲೇ ಸ್ಥಳಕ್ಕೆ ಬಂದು ಕಾಮಗಾರಿ ಪರಿಶೀಲಿಸಿ ಉತ್ತಮ ರೀತಿಯಲ್ಲಿ ಕಾಮಗಾರಿ ಮಾಡದಿದ್ದರೆ ಕಂಟ್ರಾಕ್ಟಾರ್ ಲೈಸೆನ್ಸ್ ರದ್ದು ಮಾಡುವಂತೆ ಮತ್ತು ಅಧಿಕಾರಿಗಳ ವಿರುದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದು ವನಗೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ . ಹೇಮಂತ್ ಕುಮಾರ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
